ಕಿನ್ನಾಳ್ ರಾಜ್ ನಿರ್ದೇಶನದಲ್ಲಿ ಹೊಸ ಪ್ರತಿಭೆಗಳು ನಟಿಸಿರುವ ‘ಹಿಟ್ಲರ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಭೂಗತ ಜಗತ್ತಿನ ಕತೆಗೆ ಲವ್, ಫ್ಯಾಮಿಲಿ ಸೆಂಟಿಮೆಂಟ್ ಬೆರೆಸಿ ಚಿತ್ರಕಥೆ ಮಾಡಿರುವುದಾಗಿ ಹೇಳುತ್ತಾರೆ ನಿರ್ದೇಶಕರು. ಈ ವಾರ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ.

“ತನ್ನ ತಪ್ಪಿನಿಂದಾಗಿ ಕುಟುಂಬ ಹಾಳಾಗಬಾರದೆನ್ನುವ ನಾಯಕನ ತಳಮಳವನ್ನು ನಿರೂಪಿಸಿದ್ದೇನೆ. ತಾನು ಹೇಳಿದ್ದೇ ನಿಯಮ ಎನ್ನುವ ನಾಯಕ. ಹಾಗಾಗಿ ಚಿತ್ರದ ಶೀರ್ಷಿಕೆ ‘ಹಿಟ್ಲರ್’ ಎಂದಾಗಿದೆ. ಅಂತಹ ಪಾತ್ರ, ಕಥಾನಾಯಕ ಶುರುವುನಿಂದಲೇ ರೌಡಿಯಾಗಿರುತ್ತಾನೆ. ರೌಡಿಯಿಸಂನಿಂದ ಹೊರಗಡೆ ಬಂದರೆ ಸಮಾಜ ಬಿಡುತ್ತದಾ, ಅವನು ಬದುಕುತ್ತಾನಾ? ಅವೆಲ್ಲಾವನ್ನು ಹೇಗೆ ನಿಭಾಯಿಸುತ್ತಾನೆ ಎನ್ನವುದು ಕಥಾಸಾರಾಂಶ” ಎಂದು ತಮ್ಮ ಚಿತ್ರದ ಬಗ್ಗೆ ಹೇಳುತ್ತಾರೆ ನಿರ್ದೇಶಕ ಕಿನ್ನಾಳ್ ರಾಜ್‌. ಹೊಸ ಪ್ರತಿಭೆಗಳೇ ಸೇರಿ ಸಿದ್ಧಪಡಿಸಿರುವ ’ಹಿಟ್ಲರ್’ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಗಾನಶಿವ ಮೂವೀಸ್‌ನ ಮಮತಾ ಲೋಹಿತ್ ಚಿತ್ರ ನಿರ್ಮಿಸಿದ್ದು, ಟ್ರೈಲರ್ ಬಿಡುಗಡೆಯಾಗಿದೆ.

“ಚಿತ್ರದಲ್ಲಿ ಹಲವಾರು ಪಾತ್ರಗಳಿದ್ದು, ಪ್ರತೀ ಪಾತ್ರಕ್ಕೂ ನ್ಯಾಯ ಸಲ್ಲಿಸಲು ಶ್ರಮಿಸಿದ್ದೇನೆ. ಭೂಗತ ಜಗತ್ತಿನ ಒಳಸುಳಿಗಳನ್ನು ಹೇಳುತ್ತಲೇ ಕೌಟುಂಬಿಕ ಮೌಲ್ಯಗಳನ್ನು ದಾಟಿಸುವುದು ನಮ್ಮ ಉದ್ದೇಶ” ಎನ್ನುತ್ತಾರೆ ನಿರ್ದೇಶಕ ಕಿನ್ನಾಳ್ ರಾಜ್‌. ಲೋಹಿತ್ ಈ ಚಿತ್ರದೊಂದಿಗೆ ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಸಸ್ಯ ಚಿತ್ರದ ಹಿರೋಯಿನ್‌. ವಿಜಯ್‌ ಚೆಂಡೂರು, ಗಣೇಶ್‌ ರಾವ್, ವೈಭವ್‌ನಾಗರಾಜ್, ವರ್ಧನ್‌ತೀರ್ಥಹಳ್ಳಿ, ಬಾಲ ರಾಜವಾಡಿ ಇತರರು ತಾರಾಬಳಗದಲ್ಲಿದ್ದಾರೆ. ಆಕಾಶ್ ಪರ್ವ ಸಂಗೀತ ಸಂಯೋಜನೆ, ನಾಗರಾಜ್ ಕಿನ್ನಾಳ್‌ ಛಾಯಾಗ್ರಹಣ, ಗಣೇಶ ತೋರಗಲ್ ಸಂಕಲನ ಚಿತ್ರಕ್ಕಿದೆ. ಈ ವಾರ ಸಿನಿಮಾ ತೆರೆಕಾಣುತ್ತಿದೆ.

Previous article‘ಟಿಕು ವೆಡ್ಸ್ ಶೇರು’ ಫಸ್ಟ್ ಲುಕ್; ನಟಿ ಕಂಗನಾ ರನಾವತ್‌ ನಿರ್ಮಾಣದ ಮೊದಲ ಸಿನಿಮಾ
Next articleಲಿರಿಕಲ್‌ ಸಾಂಗ್ | ಪವನ್ ಕಲ್ಯಾಣ್ ‘ಭೀಮ್ಲಾ ನಾಯಕ್’; ಇದು ‘ಅಯ್ಯಪ್ಪನಮ್ ಕೊಶಿಯಮ್‌’ ಮಲಯಾಳಂ ರೀಮೇಕ್‌

LEAVE A REPLY

Connect with

Please enter your comment!
Please enter your name here