ವಿಜಯ ಪ್ರಸಾದ್‌ ನಿರ್ದೇಶನದ ‘ತೋತಾಪುರಿ 2’ ಸಿನಿಮಾ ಆಗಸ್ಟ್‌ 11ರಂದು ತೆರೆಕಾಣಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಕಂಡಿದ್ದ ‘ತೋತಾಪುರಿ’ ಮೊದಲ ಭಾಗದ ಮುಂದುವರೆದ ಕತೆಯಿದು. Part 2ನಲ್ಲಿ ಧನಂಜಯ್‌ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ ಎನ್ನಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ 30ರಂದು ತೆರೆಕಂಡಿದ್ದ ‘ತೋತಾಪುರಿ’ ಸಿನಿಮಾಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೇ ದಿನಾಂಕದಂದು ತೆರೆಕಂಡಿದ್ದ ‘ಕಾಂತಾರ’ ಸಿನಿಮಾದ ಆಕರ್ಷಣೆಯಿಂದಲೂ ‘ತೋತಾಪುರಿ’ ಮಂಕಾಗಿತ್ತು. ‘ಚಿತ್ರದಲ್ಲಿ ಒಳ್ಳೆಯ ವಿಷಯಗಳಿವೆ, ಆದರೆ ದ್ವಂದ್ವಾರ್ಥ ಅತಿಯಾಯ್ತು’ ಎಂದು ವಿಶ್ಲೇಷಕರು ಷರಾ ಬರೆದಿದ್ದರು. ಕತೆ ಮಾಡುವಾಗಲೇ ನಿರ್ದೇಶಕ ವಿಜಯಪ್ರಸಾದ್‌ ‘ತೋತಾಪುರಿ’ ಎರಡು ಪಾರ್ಟ್‌ಗಳಿಗೆಂದು ಮಾಡಿದ್ದರು. Part 1st ಸೋಲನ್ನು ಒಪ್ಪಿಕೊಂಡಿದ್ದ ಅವರೀಗ ಎರಡನೇ ಪಾರ್ಟ್‌ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಆಗಸ್ಟ್‌ 11ರಂದು ಈ ಸಿನಿಮಾ ತೆರೆಕಾಣಲಿದೆ. ರಜನೀಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್‌’ ಸಿನಿಮಾ ಆಗಸ್ಟ್‌ 10ರಂದು ತೆರೆಕಾಣಲಿದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಕನ್ನಡ ನಟ ಶಿವರಾಜಕುಮಾರ್‌ ನಟಿಸಿದ್ದಾರೆ. ದೊಡ್ಡ ಸಿನಿಮಾದ ಎದುರು ಯಾವುದೇ ಕನ್ನಡ ಸಿನಿಮಾವನ್ನು ಬಿಡುಗಡೆ ಮಾಡಲು ಇಲ್ಲಿನ ನಿರ್ಮಾಪಕರು ಹಿಂದೇಟು ಹಾಕಿದ್ದರು. ಇದೀಗ ‘ತೋತಾಪುರಿ 2’ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಚಿತ್ರದ ನಿರ್ಮಾಪಕ ಸುರೇಶ್‌.

‘ತೋತಾಪುರಿ -1’ನಲ್ಲಿ ಜಗ್ಗೇಶ್‌ ಅವರಿಗೇ ಹೆಚ್ಚು ಸ್ಕ್ರೀನ್‌ಸ್ಪೇಸ್‌ ಇತ್ತು. ಚಿತ್ರದ ಕೊನೆಯಲ್ಲಿ ಧನಂಜಯ ಅವರ ಪಾತ್ರ ಪರಿಚಯವಾಗಿತ್ತು. ಈಗ ಭಾಗ 2ರಲ್ಲಿ ಧನಂಜಯ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ ಎನ್ನಲಾಗುತ್ತಿದೆ. ಧನಂಜಯ್‌ ಅವರಿಗೆ ಜೋಡಿಯಾಗಿ ಸುಮನ್‌ ರಂಗನಾಥ್‌ ನಟಿಸಿದ್ದಾರೆ. ‘ತೋತಾಪುರಿ’ ಮೊದಲ ಭಾಗದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹಿಟ್‌ ಆಗಿತ್ತು. ಇದೀಗ ಸೆಕೆಂಡ್‌ ಪಾರ್ಟ್‌ನಲ್ಲಿ ‘ಮೊದಲ ಮಳೆ ಮನದೊಳಗೆ’ ಸಿನಿಪ್ರೇಮಿಗಳಿಗೆ ಇಷ್ಟವಾಗಿದೆ. ಹೃದಯಶಿವ ಸಾಹಿತ್ಯ ರಚನೆಯ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಇದ್ದು ಸಂಚಿತ್‌ ಹೆಗ್ಡೆ ಹಾಡಿದ್ದಾರೆ. ಧನಂಜಯ ಮತ್ತು ಹಾಗೂ ಸುಮನ್ ರಂಗನಾಥ್ ಜೋಡಿ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ.

Previous articleಆಪನ್ಹೇಮರ್ : ಗಾಢ ವಿಷಾದ
Next article‘ಬಿಗ್‌ ಬುಲ್‌’ ಫಸ್ಟ್‌ಲುಕ್‌ | ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾದಲ್ಲಿ ಸಂಜಯ್‌ ದತ್‌

LEAVE A REPLY

Connect with

Please enter your comment!
Please enter your name here