ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ತೆರೆಕಾಣಲಿದೆ. ಚಿತ್ರದ ಹೀರೋ ರಕ್ಷಿತ್‌ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಸ್ಪೆಷಲ್‌ ವೀಡಿಯೋ ಜೊತೆ ಈ ವಿಷಯವನ್ನು ಟ್ವೀಟ್‌ ಮಾಡಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ‘ಸಪ್ತ ಸಾಗರದಾಚೆ ಎಲ್ಲೋ’. ಹೇಮಂತ ರಾವ್‌ ನಿರ್ದೇಶನದಲ್ಲಿ ರಕ್ಷಿತ್‌ ಶೆಟ್ಟಿ ನಟಿಸುತ್ತಿರುವ ಸಿನಿಮಾ ಬಹುದಿನಳಿಂದ ಚಿತ್ರೀಕರಣದಲ್ಲಿದೆ. ರಕ್ಷಿತ್‌ ಹುಟ್ಟುಹಬ್ಬವಾದ ಇಂದು ಚಿತ್ರದ ಕುರಿತಾಗಿ ಮಹತ್ವದ ವಿಷಯವೊಂದು ಹೊರಬಿದ್ದಿದೆ. ಸಿನಿಮಾ ‘Side A’ ಮತ್ತು ‘Side B’ ಎಂದು ಎರಡು ಪಾರ್ಟ್‌ಗಳಲ್ಲಿ ತೆರೆಕಾಣಲಿದೆ. ಇಂದು ವಿಶೇಷ ವೀಡಿಯೋವೊಂದನ್ನು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿ, “Your Manu is here today with a special announcement. SSE, meticulously carved out of time, love and dreams will now be brought to you in two parts – side A and side B. The shoot of the film has been concluded and the release date of both the parts will be announced on the 15th of June. We hope you receive it with love as always.” ಎಂದು ಬರೆದಿದ್ದಾರೆ.

ಚಿತ್ರ ಬಹುತೇಕ ಸಿದ್ಧವಾಗಿದ್ದು ಬಿಡುಗಡೆ ದಿನಾಂಕವನ್ನು ಜೂನ್‌ 15ರಂದು ಘೋಷಿಸುವುದಾಗಿ ರಕ್ಷಿತ್‌ ಹೇಳಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಂತರ ಹೇಮಂತರಾವ್‌ ಇಲ್ಲಿ ಮತ್ತೊಮ್ಮೆ ರಕ್ಷಿತ್‌ ಅವರ ಜೊತೆಗೂಡಿದ್ದಾರೆ. ‘ಸಪ್ತ ಸಾಗರದಲ್ಲಿ ಎಲ್ಲೋ’ ಚಿತ್ರಕ್ಕಾಗಿ ರಕ್ಷಿತ್‌ Physical transformation ಎಲ್ಲರ ಗಮನ ಸೆಳೆದಿತ್ತು. ಚಿತ್ರದಲ್ಲಿನ ತೆರೆಯ ಮೇಲಿನ ಹತ್ತು ವರ್ಷದ ನಂತರದ ತಮ್ಮ ಪಾತ್ರಕ್ಕಾಗಿ ಅವರು ಮೈತೂಕ ಹೆಚ್ಚಿಸಿಕೊಂಡಿದ್ದರು. ರುಕ್ಮಿಣಿ ವಸಂತ್‌ ಮತ್ತು ಚೈತ್ರಾ ಆಚಾರ್‌ ಚಿತ್ರದ ಇಬ್ಬರು ನಾಯಕಿಯರು. ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

Previous articleನೆಲದ ಸೊಗಡಿನ ‘ಗ್ರಾಮಾಯಣ’ಕ್ಕೆ ಮರುಚಾಲನೆ | ನಾಡಿದ್ದು ಮುಹೂರ್ತ
Next article‘ಲಸ್ಟ್‌ ಸ್ಟೋರೀಸ್‌ 2’ ಟೀಸರ್‌ | ನಾಲ್ಕು ಕಿರುಚಿತ್ರಗಳ ಆಂಥಾಲಜಿ

LEAVE A REPLY

Connect with

Please enter your comment!
Please enter your name here