‘ಲಸ್ಟ್‌ ಸ್ಟೋರೀಸ್‌ 2’ ಹಿಂದಿ ಆಂಥಾಲಜಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇಲ್ಲಿನ ನಾಲ್ಕು ಕಿರುಗತೆಗಳನ್ನು ಕೊಂಕಣ ಸೇನ್‌ ಶರ್ಮ, ಬಲ್ಕಿ, ಸುಜಯ್‌ ಘೋಷ್‌ ಮತ್ತು ಅಮಿತ್‌ ರವೀಂದ್ರನಾಥ್‌ ಶರ್ಮ ನಿರ್ದೇಶಿಸಿದ್ದಾರೆ. ಜೂನ್‌ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Netflix ಇಂದು ಆಂಥಾಲಜಿ ಸಿನಿಮಾ ‘ಲಸ್ಟ್‌ ಸ್ಟೋರೀಸ್‌ 2’ ಟೀಸರ್‌ ರಿಲೀಸ್‌ ಮಾಡಿದೆ. ಕಾಜೋಲ್‌, ನೀನಾ ಗುಪ್ತಾ, ತಮನ್ನಾ ಭಾಟಿಯಾ, ವಿಜಯ್‌ ವರ್ಮ, ಮೃಣಾಲ್‌ ಠಾಕೂರ್‌, ಅಂಗದ್‌ ಬೇಡಿ, ಅಮೃತಾ ಸುಭಾಷ್‌, ತಿಲೋತ್ತಮಾ ಶೋಮ್‌, ಕುಮುದ್‌ ಮಿಶ್ರಾ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಲಸ್ಟ್‌ ಸ್ಟೋರೀಸ್‌’ ಮೊಲದ ಸರಣಿ ಪ್ರತಿಷ್ಠಿತ Emmy ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮಿನೇಟ್‌ ಆಗಿತ್ತು. ಈ ಬಾರಿಯ ನಾಲ್ಕು ಕಿರುಚಿತ್ರಗಳನ್ನು ಕೊಂಕಣ ಸೇನ್‌ ಶರ್ಮಾ, ಬಲ್ಕಿ, ಸುಜಯ್‌ ಘೋಷ್‌ ಮತ್ತು ಅಮಿತ್‌ ರವೀಂದ್ರನಾಥ್‌ ಶರ್ಮಾ ನಿರ್ದೇಶಿಸಿದ್ದಾರೆ. ವಿವಿಧ ವಯೋಮಾನದ ಪಾತ್ರಗಳು ಟೀಸರ್‌ನಲ್ಲಿ ಕಾಣಿಸುತ್ತವೆ. ‘ಇದು ಮಹಿಳೆಯರ ದೃಷ್ಟಿಯಿಂದ ಸಂಬಂಧಗಳು, ಬದುಕನ್ನು ನೋಡುವ ಬಗೆ’ ಎಂದು ಚಿತ್ರದ ನಿರ್ಮಾಪಕರು ಹೇಳುತ್ತಾರೆ.

ಚಿತ್ರದ ನಿರ್ಮಾಪಕ ರೋನ್ನಿ ಸ್ಕ್ರ್ಯೂವಾಲಾ, ‘Emmy ಪ್ರಶಸ್ತಿಗೆ ಪಾತ್ರವಾದ ಸಿನಿಮಾದ ಸರಣಿಯನ್ನು ಮಾಡಿರುವುದು ನಮಗೆ ಹೆಮ್ಮೆ ಇದೆ. ಈ ಹಿಂದೆ ನಾವು ನೆಟ್‌ಫ್ಲಿಕ್ಸ್‌ಗೆ ಮಾಡಿದ್ದ ಮಿಷನ್‌ ಮಜ್ನೂ, ಲಸ್ಟ್‌ ಸ್ಟೋರೀಸ್‌, ಪಾವಾ ಕಡೈಗಳ್‌, ರಾತ್‌ ಅಕೇಲಿ ಹೈ, ಧಮಾಕಾ ಸಿನಿಮಾಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಬಾರಿ ಮತ್ತೊಂದು ವಿಶೇಷ ಕಂಟೆಂಟ್‌ನೊಂದಿಗೆ ಮರಳಿದ್ದೇವೆ’ ಎಂದಿದ್ದಾರೆ. ಜೂನ್‌ 29ರಿಂದ ‘ಲಸ್ಟ್‌ ಸ್ಟೋರೀಸ್‌ 2’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಎರಡು ಪಾರ್ಟ್‌ಗಳಲ್ಲಿ ರಕ್ಷಿತ್‌ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’
Next article‘ಆದಿಪುರುಷ್‌’ ಫೈನಲ್‌ ಟ್ರೈಲರ್‌ | ಪ್ರಭಾಸ್‌ 3D ಸಿನಿಮಾ ಜೂನ್‌ 16ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here