ಮೋಹನ್‌ ಕುಮಾರ್‌ ನಿರ್ದೇಶನದ ‘ಅರಿಹ’ ಸಿನಿಮಾಗೆ ಮುಹೂರ್ತ ನೆರವೇರಿದೆ. ಯುವ ಕಲಾವಿದರು ಹಾಗೂ ತಂತ್ರಜ್ಞರ ಚಿತ್ರವಿದು. ಶ್ರೀ, ಕಾಜಲ್‌ ಕುಂದರ್‌ ಮತ್ತು ಸನತ್‌ ಚಿತ್ರದ ಮುಖ್ಯಭೂಮಿಕೆಯ ಕಲಾವಿದರು.

ಯುವ ಪ್ರತಿಭೆಗಳು ರೂಪಿಸುತ್ತಿರುವ ‘ಅರಿಹ’ ಸಿನಿಮಾಗೆ ಮುಹೂರ್ತ ನೆರವೇರಿದೆ. ಕಿರುತೆರೆ ಮೂಲಕ ಜನರಿಗೆ ಚಿರಪರಿಚಿತರಾಗಿ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ನಟ ಶ್ರೀ ಚಿತ್ರದ ಹೀರೋ. ‘ಇರುವುದೆಲ್ಲವ ಬಿಟ್ಟು’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಖ್ಯಾತಿಯ ಶ್ರೀಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದಾರೆ. ‘ಕಮರೊಟ್ಟು ಚೆಕ್ ಪೋಸ್ಟ್’, ‘ಭೈರವ’, ‘ಒಲವೇ ಮಂದಾರ2’, ‘ಚಿ.ತು.ಯುವಕರ ಸಂಘ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸನತ್ ಅವರಿಗೆ ಚಿತ್ರದ ಪ್ರಮುಖ ಪಾತ್ರವಿದೆ. ಉಳಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ಆರ್ ಜೆ ವಿಕ್ಕಿ, ಅಶೋಕ್ ಶರ್ಮಾ, ಶ್ವೇತಾ ಆರ್ ಪ್ರಸಾದ್ ಚಿತ್ರದ ಪ್ರಮುಖ ಪಾತ್ರಗಳಲ್ಲಿರುತ್ತಾರೆ.

ನಿರ್ದೇಶಕ ಆದರ್ಶ್ ಈಶ್ವರಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದ್ದು, ಹಿರಿಯ ನಟಿ ಭವ್ಯ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ ಹಲವು ಕಿರುಚಿತ್ರ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹೆಚ್. ಸಾರಥ್ಯದಲ್ಲಿ ‘ಅರಿಹ’ ಸಿನಿಮಾ ಮೂಡಿ ಬರುತ್ತಿದ್ದು, ಇದು ಅವರ ಚೊಚ್ಚಲ ಸಿನಿಮಾ. ಎಂ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಸಿ.ಪಿ.ಆರ್.ಗೌಡ ಸಿನಿಮಾ ನಿರ್ಮಿಸುತ್ತಿದ್ದಾರೆ.

Previous article‘ಸರ್ಕಾರು ವಾರಿ ಪಾಟ’ ಟ್ರೈಲರ್‌; ಮಹೇಶ್‌ ಬಾಬು ಸಿನಿಮಾ ಮೇ 12ಕ್ಕೆ
Next articleಧ್ವನಿಗೆ ದೃಶ್ಯರೂಪ ನೀಡುವ ಮರಿಲಿನ್ ಮನ್ರೋಳ ಹೊಸ ಡಾಕ್ಯುಮೆಂಟರಿ

LEAVE A REPLY

Connect with

Please enter your comment!
Please enter your name here