ಜಿತೇಂದ್ರ ಕಮಾರ್‌ ನಟನೆಯ ‘ಪಂಚಾಯತ್‌’ ಸರಣಿ ಜನಪ್ರಿಯವಾಗಿತ್ತು. ವೀಕ್ಷಕರು ಇದರ ಸೀಕ್ವೆಲ್‌ ‘ಪಂಚಾಯತ್‌ 2’ ನಿರೀಕ್ಷೆಯಲ್ಲಿದ್ದರು. ಅಮೇಜಾನ್‌ ಪ್ರೈಮ್‌ ಈ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ಘೋಷಿಸಿದೆ.

ದೀಪಕ್‌ ಕುಮಾರ್‌ ಮಿಶ್ರಾ ನಿರ್ದೇಶನದ ‘ಪಂಚಾಯತ್‌ 2′ ಸರಣಿ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. ಜಿತೇಂದ್ರ ಕುಮಾರ್‌, ರಘುವೀರ್‌ ಯಾದವ್‌, ನೀನಾ ಗುಪ್ತಾ ನಟಿಸಿರುವ ಸರಣಿ ಅಮೇಜಾನ್‌ ಪ್ರೈಂನಲ್ಲಿ ಮೇ 20ರಿಂದ ಸ್ಟ್ರೀಮ್‌ ಆಗಲಿದೆ. ಇಂಜಿನಿಯರಿಂಗ್‌ ಪದವೀಧರ ಅಭಿಷೇಕ್‌, ಫುಲೆರಾದ ಪಂಚಾಯತ್‌ ಕಚೇರಿಯ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಿದ ನಂತರದ ಬೆಳವಣಿಗೆಗಳು ಸರಣಿಯ ಕಥಾವಸ್ತು. ಅಭಿಷೇಕ್‌, ಮಂಜು ದೇವಿ (ನೀನಾ ಗುಪ್ತಾ) ಮತ್ತು ಪ್ರಧಾನ್‌ ಪತಿ (ಯಾದವ್‌) ಮಧ್ಯೆಯ ಚಕಮಕಿ, ಭಿನ್ನಾಭಿಪ್ರಾಯಗಳು, ಗ್ರಾಮಸ್ಥರೊಂದಿಗೆ ನಡೆಯುವ ಮಾತುಕತೆಯನ್ನು ತಿಳಿಹಾಸ್ಯದ ನಿರೂಪಣೆಯೊಂದಿಗೆ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಮಿಶ್ರಾ. ಮೊದಲ ಸೀಸನ್‌ ಯಶಸ್ಸಿನ ಹಿನ್ನೆಲೆಯಲ್ಲಿ ಸೀಕ್ವೆಲ್‌ ಕುರಿತು ನಿರೀಕ್ಷೆ ಹೆಚ್ಚಿದೆ. “intezaar hua khatam kyunki panchayat jald hogi aarambh! #PanchayatOnPrime, new season May 20’ ಎನ್ನುವ ಒಕ್ಕಣಿಯೊಂದಿಗೆ ಪ್ರೈಮ್‌ ರಿಲೀಸ್‌ ಪ್ರೋಮೊ ಹಂಚಿಕೊಂಡಿದೆ. ವಿಶ್ವಪತಿ ಸರ್ಕಾರ್‌ ಮತ್ತು ಚಂದನ್‌ ರಾಯ್‌ ‘ಪಂಚಾಯತ್‌ 2’ ಸರಣಿಯ ಇತರೆ ಪ್ರಮುಖ ಪಾತ್ರಧಾರಿಗಳು.

Previous articleಲಹರಿಗೆ 48, ರಿಕ್ಕಿ ಕೇಜ್‌ಗೆ ಗ್ರ್ಯಾಮಿ; ಗಣ್ಯರಿಂದ ಅಭಿನಂದನೆ
Next article‘ಸರ್ಕಾರು ವಾರಿ ಪಾಟ’ ಟ್ರೈಲರ್‌; ಮಹೇಶ್‌ ಬಾಬು ಸಿನಿಮಾ ಮೇ 12ಕ್ಕೆ

LEAVE A REPLY

Connect with

Please enter your comment!
Please enter your name here