ನೂತನ್‌ ಉಮೇಶ್‌ ನಿರ್ದೇಶನದ ‘ಫೈಟರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವಿನೋದ್‌ ಪ್ರಭಾಕರ್‌ ಹೀರೋ ಆಗಿ ನಟಿಸಿರುವ ಚಿತ್ರದ ಇಬ್ಬರು ನಾಯಕಿಯರಾಇ ಲೇಖ ಚಂದ್ರಾ ಮತ್ತು ಪಾವನಾ ಇದ್ದಾರೆ. ಸೋಮಶೇಖರ್‌ ಕಟ್ಟಿಗೇನಹಳ್ಳಿ ನಿರ್ಮಾಣದ ಸಿನಿಮಾ ಆಕ್ಟೋಬರ್‌ನಲ್ಲಿ ತೆರೆಕಾಣಲಿದೆ.

ವಿನೋದ್‌ ಪ್ರಭಾಕರ್‌ ಆಕ್ಷನ್‌ – ಥ್ರಿಲ್ಲರ್‌ ‘ಫೈಟರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನೂತನ್‌ ಉಮೇಶ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರದ ಇಬ್ಬರು ನಾಯಕಿಯರಾಗಿ ಲೇಖ ಚಂದ್ರಾ ಮತ್ತು ಪಾವನಾ ಇದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ವಿನೋದ್‌ ಪ್ರಭಾಕರ್‌, ‘ಈ ಸಿನಿಮಾದಲ್ಲಿ ಕೇವಲ ಹೋರಾಟ ಹೊಡೆದಾಟಗಳಷ್ಟೇ ಇಲ್ಲ. ತಂದೆ, ತಾಯಿ, ಕುಟುಂಬದ ಸನ್ನಿವೇಶಗಳು ಕೂಡಾ ಪ್ರೇಕ್ಷಕರ ಮನ ಮುಟ್ಟುವಂತಿವೆ. ಥ್ರಿಲ್ಲರ್ ಅಂಶಗಳು ಇವೆ. ಪ್ರೇಕ್ಷಕರಿಗೆ ಮನರಂಜನೆ ಸಿಗಲಿದೆ. ನಿರ್ದೇಶಕರು ನನ್ನನ್ನು ಈ ಹಿಂದಿನ ಸಿನಿಮಾಗಳಿಗಿಂತಲೂ ಬಹಳ ಸ್ಟೈಲಿಷ್ ರೀತಿಯಲ್ಲಿ ತೋರಿಸಿದ್ದಾರೆ. ಅವ್ಯವಸ್ಥೆಯ ವಿರುದ್ಧ ಹೋರಾಡುವ ಫೈಟರ್ ಆಗಿ ನಾನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

‘ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳು ಸಿನಿಮಾದ ಟೈಟಲ್​ ಬಿಡುಗಡೆ ಮಾಡಿದ್ದರು. ಶೀಘ್ರದಲ್ಲೇ ಹಾಡುಗಳು ಮತ್ತು ಟ್ರೈಲರ್‌ ಬಿಡುಗಡೆ ಮಾಡುತ್ತೇವೆ. ಅಕ್ಟೋಬರ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ತಯಾರಿ ನಡೆಯುತ್ತಿದೆ. ಫೈಟರ್ ಅಂದ್ರೆ ಹೊಡೆದಾಡುವವನು ಅಂತ ಎಲ್ಲರೂ ಊಹಿಸುತ್ತಾರೆ. ಆದರೆ ನಮ್ಮ ಸಿನಿಮಾದ ಫೈಟರ್ ತನ್ನ ಕುಟುಂಬಕ್ಕಾಗಿ ಮತ್ತು ಅನ್ಯಾಯದ ವಿರುದ್ಧ ಹೋರಾಡುತ್ತಾನೆ.‌ ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಹೊಸ ಲುಕ್ ಇದೆ’ ಎನ್ನುವುದು ನಿರ್ದೇಶಕ ನೂತನ್‌ ಉಮೇಶ್‌ ಅವರ ಮಾತು. ಗುರುಕಿರಣ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. Akash Enterprises ಬ್ಯಾನರ್‌ ಅಡಿ ಸೋಮಶೇಖರ್‌ ಕಟ್ಟಿಗೇನಹಳ್ಳಿ ಈ ಸಿನಿಮಾ ನಿರ್ಮಿಸಿದ್ದಾರೆ. ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here