ರಶೀಖ್‌ ಖಾನ್‌ ನಿರ್ದೇಶನದ ‘ಸೆಕ್ಷನ್‌ 108’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನವಾಜುದ್ದೀನ್‌ ಸಿದ್ದಿಕಿ ಮತ್ತು ರೆಜಿನಾ ಕ್ಯಾಸಾಂದ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು. ಮುಂದಿನ ವರ್ಷ ಫೆಬ್ರವರಿ 2ರಂದು ಸಿನಿಮಾ ತೆರೆಗೆ ಬರಲಿದೆ.

ನವಾಜುದ್ದೀನ್ ಸಿದ್ದಿಕಿ ಮತ್ತು ರೆಜಿನಾ ಕ್ಯಾಸಾಂದ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸೆಕ್ಷನ್ 108’ (Section-108) ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ರಶೀಖ್‌ ಖಾನ್ ನಿರ್ದೇಶಿಸಿದ್ದಾರೆ. ಸನ್‌ರೈಸ್ ಇನ್ಶೂರೆನ್ಸ್ ಸಂಸ್ಥೆಯ ಪ್ರತಿನಿಧಿಯಾಗಿ ಶಿಖಾ ಸಕ್ಸೇನಾ (ರೆಜಿನಾ ಕ್ಯಾಸಾಂದ್ರಾ) ತನ್ನ ಬಳಿ ಒಂದು ಕೇಸ್ ಇದೆ, ಅವನೊಬ್ಬ ಬಿಲಿಯನೇರ್‌… ಅವನು ನಾಪತ್ತೆಯಾಗಿದ್ದಾನೆ ಎಂದು ವಿವರಣೆ ನೀಡುವ ಮೂಲಕ ಟೀಸರ್‌ ಆರಂಭವಾಗುತ್ತದೆ. ತಾಹೂರ್ ಖಾನ್‌ಗೆ (ನವಾಜುದ್ದೀನ್‌ ಸಿದ್ಧಿಕಿ) ಈ ಕೇಸ್‌ ಅನ್ನು ನೀವು ನಿಭಾಯಿಸುತ್ತೀರಾ? ಎಂದು ಶಿಖಾ ಕೇಳುತ್ತಾಳೆ. ಇದು ಹಗರಣ ಎಂದು ಕಳವಳ ವ್ಯಕ್ತಪಡಿಸುವ ತಾಹೂರ್‌, ಈ ಕೇಸ್‌ ಅನ್ನು ನಿಭಾಯಿಸುವುದಾಗಿ, ಪ್ರಕರಣವನ್ನು ಶೀರ್ಘವಾಗಿ ಪರಿಹರಿಸುವ ಭರವಸೆ ನೀಡುತ್ತಾನೆ. Cinemawala ಮತ್ತು Three Arrows Production ಬ್ಯಾನರ್‌ ಅಡಿ ಅನೀಸ್ ಬಾಜ್ಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಸಿಫ್ ಖಾನ್, ರೂಮಿ ಖಾನ್, ಸನಂದ್ ವರ್ಮಾ, ಅಲಿಶಾ ಓಹ್ರಿ, ಸಹರ್ಷ್ ಕುಮಾರ್ ಶುಕ್ಲಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. 2024ರ ಫೆಬ್ರವರಿ 2ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here