ಸುದೀಪ್ತೋ ಸೇನ್‌ ನಿರ್ದೇಶನದ ‘ಬಸ್ತರ್ ದಿ ನಕ್ಸಲ್ ಸ್ಟೋರಿ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಕ್ಸಲ್‌ ಹೋರಾಟದ ಸುತ್ತ ಹೆಣೆದ ಕತೆಯಿದು. ‘ದಿ ಕೇರಳ ಸ್ಟೋರಿ’ ಸಿನಿಮಾದ ತಂಡದಿಂದ ತಯಾರಾಗಿರುವ ಪ್ರಯೋಗ. ಅದಾ ಶರ್ಮ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ಮಾರ್ಚ್‌ 15ರಂದು ತೆರೆಕಾಣಲಿದೆ.

ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಬಸ್ತರ್ ದಿ ನಕ್ಸಲ್ ಸ್ಟೋರಿ’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ‘ದಿ ಕೇರಳ ಸ್ಟೋರಿ’ ತಂಡದ ಮತ್ತೊಂದು ವಿಭಿನ್ನ ಕತೆಯಿದು. ವಿಪುಲ್‌ ಅಮೃತ್‌ಲಾಲ್‌ ಷಾ ನಿರ್ಮಾಣದ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಸಿನಿಮಾ ನಕ್ಸಲೈಟ್ ಚಳುವಳಿಯನ್ನು ಆಧರಿಸಿದೆ. ‘ಐಸಿಸ್ ನಂತರ ಈ ನಕ್ಸಲೀಯರು ವಿಶ್ವದ ಮೂರನೇ ಅತ್ಯಂತ ಅಪಾಯಕಾರಿಯಾದವರು’ ಎನ್ನುವ ವಾಯ್ಸ್‌ಓವರ್‌ನೊಂದಿಗೆ ಟ್ರೇಲರ್‌ ಪ್ರಾರಂಭವಾಗುತ್ತದೆ. 76 ಭಾರತೀಯ ಸಿಆರ್‌ಪಿಎಫ್ ಯೋಧರು ಸುಕ್ಮಾದ ತಡ್ಮೆಟ್ಲಾದಲ್ಲಿ ಹುತಾತ್ಮರಾಗಿರುತ್ತಾರೆ. ಬಸ್ತರ್‌ನ ನಕ್ಸಲ್ ವ್ಯಕ್ತಿಯೊಬ್ಬ ಭಾಷಣದಲ್ಲಿ 76 ಭಾರತೀಯ ಸಿಆರ್‌ಪಿಎಫ್ ಯೋಧರನ್ನು ಉಲ್ಲೇಖಿಸುವಾಗ ‘ಅವರು 76 ನಾಯಿಗಳನ್ನು ಕೊಂದಿದ್ದಾರೆ’ ಎಂದು ಹೇಳಿಕೆ ನೀಡುತ್ತಾನೆ.

ಚಿತ್ರದಲ್ಲಿ ಅದಾ ಶರ್ಮಾ ಐಜಿ (Inspector-General of Police) ನೀರಜಾ ಮಾಧವನ್ ಪಾತ್ರ ನಿರ್ವಹಿಸಿದ್ದು, ಅವರು ಸಶಸ್ತ್ರ ಪಡೆಗಳ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕ್ಷಲೈಟ್‌ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ನಿರ್ಜಾ ತನ್ನ ದಕ್ಷತೆ ಮತ್ತು ಧೈರ್ಯವನ್ನು ತೋರಿಸಿರುವುದು ಟ್ರೇಲರ್‌ನಲ್ಲಿ ಕಾಣಬಹುದು. ಇದೊಂದು ದೇಶಭಕ್ತಿಯ ಕಥಾಹಂದರವಾಗಿದೆ. ಚಿತ್ರ Vipul Amrutlal Shah Production ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರವನ್ನು Sunshine Pictures Pvt. Ltd ಪ್ರಸ್ತುತ ಪಡಿಸಿದೆ. ಸುದೀಪ್ತೋ ಸೇನ್, ಅಮರನಾಥ್ ಝಾ ಕಥೆ ರಚಿಸಿದ್ದಾರೆ. ಅಮರನಾಥ್ ಝಾ, ಸುದೀಪ್ತೋ ಸೇನ್ ಮತ್ತು ವಿಪುಲ್ ಅಮೃತಲಾಲ್ ಶಾ ಚಿತ್ರಕಥೆ ಬರೆದಿದ್ದಾರೆ. ಚಲನಚಿತ್ರ ಮಾರ್ಚ್‌ 15ರಂದು ತೆರೆಕಾಣಲಿದೆ. ಇಂದಿರಾ ತಿವಾರಿ, ವಿಜಯ್ ಕೃಷ್ಣ, ಯಶ್‌ಪಾಲ್ ಶರ್ಮಾ, ರೈಮಾ ಸೇನ್ ಮತ್ತು ಶಿಲ್ಪಾ ಶುಕ್ಲಾ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಘುಲ್ ಹೆರಿಯನ್ ಧರುಮನ್ ಛಾಯಾಗ್ರಹಣ, ದೇವ್ ರಾವ್ ಜಾಧವ್ ಸಂಕಲನ, ಬಿಶಾಖ್ ಜ್ಯೋತಿ ಮಜುಂದಾರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here