ದೀಪಾವಳಿ ನಿಮಿತ್ತ ‘ಡಂಕಿ’ ಚಿತ್ರತಂಡದಿಂದ ಎರಡು ನೂತನ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ರಾಜಕುಮಾರ್‌ ಹಿರಾನಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶಾರುಖ್‌ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ನಟಿಸಿದ್ದಾರೆ. ಡಿಸೆಂಬರ್‌ 22, 2023ರಂದು ಸಿನಿಮಾ ತೆರೆಕಾಣಲಿದೆ.

ಶಾರುಖ್ ಖಾನ್ ಅಭಿನಯದ ‘ಡಂಕಿ’ ಹಿಂದಿ ಚಿತ್ರತಂಡದಿಂದ ದೀಪಾವಳಿ ಹಬ್ಬದ ವಿಶೇಷವಾಗಿ ಎರಡು ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ರಾಜ್‌ ಕುಮಾರ್‌ ಹಿರಾನಿ ನಿರ್ದೇಶನದ ಸಿನಿಮಾ ಇದೇ ಡಿಸೆಂಬರ್‌ 22, 2023ರಂದು ತೆರೆಕಾಣಲಿದೆ. ಪೋಸ್ಟರ್‌ಗಳಲ್ಲಿ ಶಾರುಖ್‌ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕಾಣಿಸಿಕೊಂಡಿದ್ದಾರೆ. ಮೊದಲ ಫೋಸ್ಟರ್‌ನಲ್ಲಿ ಸ್ಕೂಟರ್‌ವೊಂದರ ಮೇಲೆ ಶಾರುಖ್‌, ವಿಕ್ರಮ್‌ ಕೊಚ್ಚಾರ್ ಮತ್ತು ತಾಪ್ಸಿ ಪನ್ನು ಇದ್ದಾರೆ. ಪಕ್ಕದಲ್ಲೇ ಬೈಸಿಕಲ್‌ ಒಂದರ ಮೇಲೆ ಅನಿಲ್‌ ಗ್ರೋವಾರ್‌ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಫೊಸ್ಟರ್‌ನಲ್ಲಿ ಇವರೆಲ್ಲರೂ ಪುಸ್ತಕ ಹಿಡಿದು ನಿಂತಿದ್ದಾರೆ.

ಶಾರುಖ್‌ ಖಾನ್‌ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದು, ‘ಡಂಕಿಯಂತಹ ಕುಟುಂಬವಿಲ್ಲದಿದ್ದರೆ, ದೀಪಾವಳಿ ಮತ್ತು ಹೊಸ ವರ್ಷ ಹೇಗಿರುತ್ತದೆ? ಒಟ್ಟಿಗೆ ನಡೆಯುವುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಹಬ್ಬವನ್ನು ಆಚರಿಸುವುದು ನಿಜವಾದ ಮೋಜು. ಇದು ಡಂಕಿಯ ಇಡೀ ಜಗತ್ತು’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. Jio Cinema ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದು, RedChillies Entertainment ನಿರ್ಮಿಸಿದೆ. ಚಿತ್ರಕ್ಕೆ ಪ್ರೀತಮ್‌ ಸಂಗೀತ ಸಂಯೋಜಿಸಿದ್ದು, ಜಾವೆದ್‌ ಅಖ್ತರ್‌ ಸಾಹಿತ್ಯ ರಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here