ಶಾರುಖ್‌ ಅಭಿನಯದ ‘ಜವಾನ್‌’ ಹಿಂದಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ವಹಿವಾಟು ನಡೆಸುತ್ತಿದೆ. ಈ ಮಧ್ಯೆ ಚಿತ್ರದ ಓಟಿಟಿ ಬಿಡುಗಡೆ ಹಕ್ಕುಗಳು Netflixಗೆ ಮಾರಾಟವಾಗಿರುವ ಸುದ್ದಿ ಹೊರಬಿದ್ದಿದೆ. Free Press Journal ಪ್ರಕಾರ Netflix 250 ಕೋಟಿ ರೂ.ಗೆ ‘ಜವಾನ್‌’ ಹಕ್ಕುಗಳನ್ನು ಖರೀದಿಸಿದೆ.

ಶಾರುಖ್‌ ಖಾನ್‌ ‘ಜವಾನ್‌’ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗಲಿದೆ. Free Press Journal ಪ್ರಕಾರ Netflix ‘ಜವಾನ್’ ಸಿನಿಮಾದ ಹಕ್ಕನ್ನು 250 ಕೋಟಿ ರೂ.ಗೆ ಖರೀದಿಸಿದೆ. ಮೂಲಗಳ ಪ್ರಕಾರ ಅಕ್ಟೋಬರ್‌ ತಿಂಗಳಿನಿಂದ ಸಿನಿಮಾ OTTಯಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್‌, ಆಜಾದ್ ರಾಥೋಡ್ ಮತ್ತು ವಿಕ್ರಮ್ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ ಪೊಲೀಸ್ ಅಧಿಕಾರಿಯಾಗಿ, ವಿಜಯ್ ಸೇತುಪತಿ ನೆಗೆಟೀವ್‌ ಶೇಡ್‌ನಲ್ಲಿ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿದ್ದಾರೆ. ಬಹುತೇಕ ದಕ್ಷಿಣದ ತಾರೆಯರೆ ನಟಿಸಿರುವ, ಖ್ಯಾತ ತಮಿಳು ಚಿತ್ರನಿರ್ದೇಶಕ ಅಟ್ಲೀ ಸಾರಥ್ಯದ ಈ ಸಿನಿಮಾವನ್ನು Red Chillies Entertainment ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ನಿ‌ರ್ಮಿಸಿದ್ದಾರೆ. ಅನಿರುದ್ದ್‌ ರವಿಚಂದರ್‌ ಅವರ ಸಂಗೀತ ಸಂಯೋಜನೆಯಿದೆ. ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ಸುನಿಲ್‌ ಗ್ರೋವರ್‌, ರಿದ್ಧಿ ಡೋಗ್ರಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್‌ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆಯ ವಹಿವಾಟು ನಡೆಸುತ್ತಿದೆ.

LEAVE A REPLY

Connect with

Please enter your comment!
Please enter your name here