ಯಶ್‌ರಾಜ್‌ ನಿರ್ಮಾಣ ಸಂಸ್ಥೆ ನಿರ್ಮಿಸಲಿರುವ ನೂತನ spy – action ಹಿಂದಿ ಸಿನಿಮಾದಲ್ಲಿ ಆಲಿಯಾ ಭಟ್‌ ನಟಿಸಲಿದ್ದಾರೆ. ಈ ವರ್ಷದ ಕೊನೆಗೆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ಮೂಲಕ ಆಲಿಯಾ Yashraj Films Spy Universe ಭಾಗವಾಗುತ್ತಿದ್ದಾರೆ.

ನಟಿ ಆಲಿಯಾ ಭಟ್‌ ಅವರು ಯಶ್‌ರಾಜ್‌ ನಿರ್ಮಾಣ ಸಂಸ್ಥೆ ನಿರ್ಮಿಸಲಿರುವ spy ಸಿನಿಮಾದ ನಾಯಕಿಯಾಗಿ ನಟಿಸಲಿದ್ದಾರೆ. ಯಶ್‌ರಾಜ್‌ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ CEO ಅಕ್ಷಯ್‌ ವಿಧಾನಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅಕ್ಷಯ್‌ ವಿಧಾನಿ, ‘ಆಲಿಯಾ ಭಟ್ Spy universe ಭಾಗವಾಗಿದ್ದಾರೆ. ಈ ವರ್ಷದ ಅಂತ್ಯಕ್ಕೆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಾರ್ವರಿ ವಾಘ್ ಅವರ ಜೊತೆ ಆಲಿಯಾ ಅಭಿನಯಿಸಲಿದ್ದಾರೆ. ಆಕ್ಷನ್ – ಥ್ರಿಲ್ಲರ್‌ ಸಿನಿಮಾದಲ್ಲಿ ಸೂಪರ್ ಏಜೆಂಟ್‌ಗಳಾಗಿ ಇವರು ನಟಿಸಲಿದ್ದಾರೆ. ಸ್ಪೈ ಯೂನಿವರ್ಸ್ ಅಡಿಯಲ್ಲಿ ನಾವು ಹಲವು ಸಿನಿಮಾಗಳನ್ನು ಮಾಡಲಿದ್ದೇವೆ’ ಎಂದಿದ್ದಾರೆ. ಆಲಿಯಾ ಭಟ್ ಅವರು ಈ ಹಿಂದೆ ಹಲವು ಸಾಹಸಮಯ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಅವರ ಜೊತೆ Yashraj Films Spy Universe ಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ.

‘ಪಠಾಣ್‌’, ‘ಟೈಗರ್’ ಮತ್ತು ‘ವಾರ್‌’ನಂತಹ ಹಲವಾರು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ನೀಡಿದ ನಂತರ YRF spy universe ಹೆಚ್ಚು ಖ್ಯಾತಿ ಗಳಿಸಿದೆ. ಹೈ-ಆಕ್ಟೇನ್-ಆಕ್ಷನ್‌ ಸಿನಿಮಾಗಳಿಗೆ ಪ್ರಸಿದ್ದಿ ಪಡೆದಿರುವ YRF ಸ್ಪೈ ಯೂನಿವರ್ಸ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ‘ಏಕ್ ಥಾ ಟೈಗರ್‌’ ಸಿನಿಮಾದೊಂದಿಗೆ ಪ್ರಾರಂಭವಾಯಿತು. ನಂತರ ಹೃತಿಕ್ ರೋಷನ್ ಅವರ ‘ವಾರ್’ ಮತ್ತು ಶಾರುಖ್‌ರ ‘ಪಠಾಣ್ʼ ಸಿನಿಮಾಗಳೊಂದಿಗೆ ಯಶಸ್ಸಿನ ಹಾದಿಯಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ‘ವಾರ್ 2’ ನಿರ್ಮಿಸಲಿದ್ದು, ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್, ಜೂನಿಯರ್ NTR, ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here