ಶಾಹೀದ್‌ ಕಪೂರ್‌ ಆಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿರುವ ‘Bloody Daddy’ ಟ್ರೈಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ಅಲಿ ಅಬ್ಬಾಸ್‌ ಜಾಫರ್‌ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ತುಂಬಿಸಿದ್ದಾರೆ. ಡಯಾನಾ ಪೆಂಟಿ ಚಿತ್ರದ ಹಿರೋಯಿನ್‌. ಜೂನ್‌ 9ರಿಂದ JioCinemaದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಶಾಹೀದ್‌ ಕಪೂರ್‌ ಅವರ ಆಕ್ಷನ್‌ – ಥ್ರಿಲ್ಲರ್‌ ‘ಬ್ಲಡೀ ಡ್ಯಾಡಿ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ‘ಟೈಗರ್ ಜಿಂದಾ ಹೈ’ ಖ್ಯಾತಿಯ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಚಿತ್ರವಿದು. ಆಕ್ಷನ್‌ ಹೀರೋ ಶಾಹೀದ್‌, ರೋನಿತ್ ರಾಯ್, ಸಂಜಯ್ ಕಪೂರ್ ಮತ್ತು ಡಯಾನಾ ಪೆಂಟಿ ಪಾತ್ರಗಳ ಪರಿಚಯ ಟ್ರೈಲರ್‌ನಲ್ಲಿ ಸಿಗುತ್ತದೆ. ಹೋಟೆಲ್‌ ಡಾರ್ಕ್ ಹಾಲ್‌ವೇನಲ್ಲಿ ಬ್ಲಾಕ್ ಸೂಟ್‌ ಧರಿಸಿದ ಶಾಹೀದ್, ಫ್ರೇಮ್‌ಗೆ ಪ್ರವೇಶಿಸುವುದರೊಂದಿಗೆ ಟ್ರೈಲರ್‌ ಪ್ರಾರಂಭವಾಗುತ್ತದೆ. ಹಿನ್ನೆಲೆಯಲ್ಲಿ, ‘Ye meri us raat ki kahaani…’ ಎನ್ನುವ ಹಿನ್ನೆಲೆ ದನಿ ಕೇಳಿಸುತ್ತದೆ.

ಆಕ್ಷನ್‌ ಸಿನಿಮಾದಲ್ಲಿ ಬ್ಲಡ್‌ಶೇಡ್‌ ಹೆಚ್ಚೇ ಕಾಣಿಸುತ್ತದೆ. ಅಡುಗೆಮನೆಯಲ್ಲಿನ ಸಾಹಸ ದೃಶ್ಯವು ಇತ್ತೀಚೆಗೆ ಬಿಡುಗಡೆಯಾದ ‘Citadel’ನಲ್ಲಿನ ಪ್ರಿಯಾಂಕಾ ಚೋಪ್ರಾ ಅವರ ಸಾಹಸ ದೃಶ್ಯವನ್ನು ನೆನಪಿಸುತ್ತದೆ. ಶಾಹೀದ್ Instagramನಲ್ಲಿ ಟ್ರೈಲರ್‌ ಹಂಚಿಕೊಂಡಿದ್ದು, ‘One hell of a BLOODY night. Trailer out now! #BloodyDaddy Watch #BloodyDaddyOnJioCinema, streaming free on 9th June!’ ಎಂದು ಬರೆದಿದ್ದಾರೆ.

ಶಾಹೀದ್ ಹೊಸ ಲುಕ್ ಬಗ್ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ‘Looking bloody good!’ ಎಂದು ಒಬ್ಬರು, ‘Shahid Kapoor is back with a bang!’ ಎಂದಿದ್ದಾರೆ ಮತ್ತೊಬ್ಬರು. ಹಲವರು ‘fire emotions’ ಎಂದು ಕಾಮೆಂಟ್ ಮಾಡಿದ್ದಾರೆ. ‘ನಮ್ಮ ಭಾರತವು ತನ್ನದೇ ಆದ ಜಾನ್ ವಿಕ್ ಅನ್ನು ಹೊಂದಿದೆ. ಶಾಹಿದ್ ಕಪೂರ್ ಅವರು ಈ ಅದ್ಭುತ ಟ್ರೈಲರ್ ಮೂಲಕ ಮತ್ತೊಮ್ಮೆ ಏನು ಬೇಕಾದರೂ ಸಾಧಿಸಬಹುದು’ ಎಂದು ಒಬ್ಬರು ಬರೆದಿದ್ದಾರೆ. ‘Bloody Daddy’ ಚಿತ್ರವು 2011ರ ಫ್ರೆಂಚ್ ಸಿನಿಮಾ ‘Nuit Blanche’ ರೀಮೇಕ್‌. ಚಿತ್ರದ ಬಗ್ಗೆ ಮಾತನಾಡುತ್ತಾ ಶಾಹೀದ್, ‘ಆಕ್ಷನ್ ಸಿನಿಮಾ ತುಂಬಾ ಖುಷಿ ತಂದಿದೆ, ನಾನು ಅಲಿ ಅಬ್ಬಾಸ್‌ರೊಂದಿಗೆ ಕೆಲಸ ಮಾಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ’ ಎಂದಿದ್ದಾರೆ. ಚಿತ್ರವು ಜೂನ್ 9ರಿಂದ ಜಿಯೋ ಸಿನಿಮಾಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಡೇರ್ ಡೆವಿಲ್ ಮುಸ್ತಾಫಾ | ‘ಕಾಮನ್ ಸೆನ್ಸ್’ನ ಒಳಗಿನ ನೋಟ
Next articleಶಿವರಾಜಕುಮಾರ್‌ ‘ಭೈರತಿ ರಣಗಲ್‌’ ಸಿನಿಮಾಗೆ ಚಾಲನೆ | ಇದು ‘ಮಫ್ತಿ’ ಪ್ರೀಕ್ವೆಲ್‌

LEAVE A REPLY

Connect with

Please enter your comment!
Please enter your name here