ಬಹುಭಾಷಾ ನಟಿ ತ್ರಿಷಾ ಅಭಿನಯದ ಚೊಚ್ಚಲ ವೆಬ್‌ ಸರಣಿ ‘ಬೃಂದಾ’ ಶೂಟಿಂಗ್‌ ಶುರುವಾಗಿದೆ. ಸೂರ್ಯ ವೆಂಗಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ತೆಲುಗು ಸೀರೀಸ್‌ SoniLIV ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ದಕ್ಷಿಣದ ಖ್ಯಾತ ನಾಯಕನಟಿ ತ್ರಿಷಾ ‘ಬೃಂದಾ’ ವೆಬ್‌ ಸರಣಿಯ ಪ್ರಮುಖ ಪಾತ್ರದೊಂದಿಗೆ ಡಿಜಿಟಲ್‌ ಮೀಡಿಯಾ ಪ್ರವೇಶಿಸುತ್ತಿದ್ದಾರೆ. ಸೂರ್ಯ ವೆಂಗಲ ನಿರ್ದೇಶನದಲ್ಲಿ ಈ ಸರಣಿ SoniLIV ಓಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಸಿದ್ಧವಾಗುತ್ತಿದೆ. ಇದೊಂದು ಇನ್ವೆಸ್ಟಿಗೇಟೀವ್‌ ಥ್ರಿಲ್ಲರ್ ಎನ್ನಲಾಗಿದ್ದು, ತ್ರಿಷಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಸರಣಿ ಸಿದ್ಧವಾಗುತ್ತಿದ್ದು, ತಮಿಳು, ಹಿಂದಿ ಭಾಷೆಗಳಲ್ಲೂ ಭಾಷೆಗಳಲ್ಲೂ ಸ್ಟ್ರೀಮ್ ಆಗಲಿದೆ. ಅವಿನಾಶ್ ಕೊಳ್ಳ ಮತ್ತು ಆಶಿಷ್ ಕೊಳ್ಳ ಈ ಸರಣಿ ನಿರ್ಮಿಸುತ್ತಿದ್ದಾರೆ.

ತ್ರಿಷಾ ಅಭಿನಯದ ‘ಪರಮಪದಮ್‌ ವಿಳಯಟ್ಟು’ ಸಿನಿಮಾ ನೇರವಾಗಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ ಪ್ಲಾಟ್‌ಫಾರ್ಮ್‌ನಲ್ಲಿ ಇತ್ತೀಚೆಗೆ ತೆರೆಕಂಡಿತ್ತು. ವಿಮರ್ಶಕರು ಮತ್ತು ವೀಕ್ಷಕರಿಂದ ಚಿತ್ರಕ್ಕೆ ನೆಗೆಟೀವ್‌ ರಿವ್ಯೂಗಳು ವ್ಯಕ್ತವಾಗಿದ್ದವು. ಇನ್ನು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಜೊತೆ ಅವರು ‘ದ್ವಿತ್ವ’ ಚಿತ್ರದಲ್ಲಿ ನಟಿಸಲಿದ್ದಾರೆ. ‘ಯೂ ಟರ್ನ್‌’ ಸಿನಿಮಾ ಖ್ಯಾತಿಯ ಪವನ್‌ಕುಮಾರ್ ನಿರ್ದೇಶನದ ಚಿತ್ರವಿದು. ಮಣಿರತ್ನಂ ನಿರ್ದೇಶನದ ಪೀರಿಯಡ್‌ ಡ್ರಾಮಾ ‘ಪೊನ್ನಿಯಿನ್ ಸೆಲ್ವನ್‌’ ಚಿತ್ರದ ಪಾತ್ರವೊಂದರಲ್ಲಿ ತ್ರಿಷಾ ನಟಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದ್ದು, ತ್ರಿಷಾ ಅವರು ‘ರಾಣಿ ಕುಂದವೈ’ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here