ನೆಟ್‌ಫ್ಲಿಕ್ಸ್‌ ರಿವೇಂಜ್‌ ಡ್ರಾಮಾ ‘CAT’ನಲ್ಲಿ ಬಾಲಿವುಡ್‌ ನಟ ರಣದೀಪ್‌ ಹೂಡಾ ಪತ್ತೇದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಲ್ವಿಂದರ್‌ ಸಿಂಗ್‌ ಜಂಜುವಾ ನಿರ್ದೇಶನದ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

ಸ್ಯಾಮ್‌ ಹರ್‌ಗ್ರೇವ್‌ ನಿರ್ದೇಶನದ ‘ಎಕ್ಸ್‌ಟ್ರಾಕ್ಷನ್‌’ ನಂತರ ಬಾಲಿವುಡ್‌ ನಟ ರಣದೀಪ್‌ ಹೂಡಾ ನೆಟ್‌ಫ್ಲಿಕ್ಸ್‌ನ ಮತ್ತೊಂದು ಸರಣಿ ‘CAT’ನಲ್ಲಿ ನಟಿಸುತ್ತಿದ್ದಾರೆ. ಇಂದು ನೆಟ್‌ಫ್ಲಿಕ್ಸ್‌ ಈ ರಿವೇಂಜ್‌ – ಥ್ರಿಲ್ಲರ್‌ ಸರಣಿಯಲ್ಲಿನ ನಟನ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ. ಬಲ್ವಿಂದರ್‌ ಸಿಂಗ್‌ ಜಂಜುವಾ ನಿರ್ದೇಶನದ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ. ನಿರ್ದೇಶಕ ಜಂಜುವಾ ಈ ಹಿಂದೆ ‘ಸಾಂದ್‌ ಕಿ ಆಂಖ್‌’, ‘ಮುಬಾರಕನ್‌’ ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದರು. ಟರ್ಬನ್‌ ಧರಿಸಿರುವ ಹೂಡಾರ ಬ್ಲಾಕ್‌ ಅಂಡ್‌ ವೈಟ್‌ ಫೋಟೊ ಜೊತೆ ಪೋಸ್ಟರ್‌ನ ತುದಿಯಲ್ಲಿ ಗನ್‌ ಇದೆ. “The choices are few and dangerous when you belong to rival gangs. We’re at the edge of our seats. The story of #CAT is coming soon!” ಎನ್ನುವ ಸಂದೇಶದೊಂದಿಗೆ ನೆಟ್‌ಫ್ಲಿಕ್ಸ್‌ ಈ ಪೋಸ್ಟರ್‌ ಟ್ವೀಟ್‌ ಮಾಡಿದೆ.

ಪಂಜಾಬ್‌ ನೆಲದಲ್ಲಿ ಚಿತ್ರಿಸಿರುವ ಸರಣಿ. ಅಮಾಯಕ ವ್ಯಕ್ತಿಯೊಬ್ಬ ತನಗೆ ಅರಿವಿಲ್ಲದಂತೆ ಡ್ರಗ್ಸ್‌ ಟ್ರಾಫಿಕಿಂಗ್‌ ಸುಳಿಯಲ್ಲಿ ಸಿಲುಕುವ ಕತೆ. ಜಾಗತಿಕ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸುತ್ತಿರುವ ಸರಣಿಯಿದು ಎಂದಿದ್ದಾರೆ ನಟ ಹೂಡಾ. ಮೂವೀ ಟನಲ್‌ ಪ್ರೊಡಕ್ಷನ್ಸ್‌ ಮತ್ತು ಜೆಲ್ಲಿ ಬೀನ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಿಸುತ್ತಿರುವ ಸರಣಿಯ ನಾಯಕಿಯಾಗಿ ನಟಿ ಇಲಿಯಾನಾ ಡಿಕ್ರೂಝ್‌ ನಟಿಸುತ್ತಿದ್ಧಾರೆ.

LEAVE A REPLY

Connect with

Please enter your comment!
Please enter your name here