ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ‘ಥಗ್ ಲೈಫ್’ ಸಿನಿಮಾದ ತಂಡಕ್ಕೆ ನಟ ಸಿಲಂಬರಸನ್ ಸೇರ್ಪಡೆಗೊಂಡಿದ್ದಾರೆ. ಕಮಲ ಹಾಸನ್ ನಟನೆಯ ಭೂಗತ ಜಗತ್ತಿನ ಕತೆಯಿದು. ತ್ರಿಷಾ, ಜಯಂ ರವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಮಣಿರತ್ನಂ ನಿರ್ದೇಶನದಲ್ಲಿ ಕಮಲ ಹಾಸನ್ ನಟಿಸುತ್ತಿರುವ ‘ಥಗ್ ಲೈಫ್’ ಚಿತ್ರತಂಡಕ್ಕೆ ನಟ ಸಿಲಂಬರಸನ್ ಸೇರ್ಪಡೆಯಾಗಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸಿಂಗ್ ಮಾಡುತ್ತಾ ಬುಲೆಟ್ ಫೈರ್ ಮಾಡುವ ಸಿಲಂಬರಸನ್ ಝಲಕ್ ಬಿಡುಗಡೆ ಮಾಡಿ ಚಿತ್ರತಂಡ ಅವರನ್ನು ಸ್ವಾಗತಿಸಿದೆ. 36 ವರ್ಷಗಳ ಹಿಂದೆ ಮಣಿರತ್ನಂ ಮತ್ತು ಕಮಲ್ ಜೋಡಿಯ ‘ನಾಯಗನ್’ ತಮಿಳು ಸಿನಿಮಾ ಮೈಲಗಲ್ಲು ಸೃಷ್ಟಿಸಿತ್ತು. ಈಗ ‘ಥಗ್ ಲೈಫ್’ ಚಿತ್ರದೊಂದಿಗೆ ಇವರು ಮತ್ತೆ ತೆರೆಗೆ ಬರುತ್ತಿದ್ದಾರೆ. ಸಿಲಂಬರಸನ್ ಸೇರ್ಪಡೆಯಿಂದಾಗಿ ಚಿತ್ರದ ಸ್ಟಾರ್ ವ್ಯಾಲ್ಯೂ ಹಿಗ್ಗಿದಂತಾಗಿದೆ. ಈ ಚಿತ್ರವನ್ನು ಕಮಲ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ಅವರು ಜೊತೆಗೂಡಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ. ಎ ಆರ್ ರೆಹಮಾನ್ ಸಂಗೀತ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ತ್ರಿಷಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.