ಬಹುಭಾಷಾ ನಟಿ, ಡ್ಯಾನ್ಸರ್‌ ಸಿಲ್ಮ್‌ ಸ್ಮಿತಾ ಬಯೋಪಿಕ್‌ ಸೆಟ್ಟೇರುತ್ತಿದೆ. ಜಯರಾಂ ನಿರ್ದೇಶಿಸಲಿರುವ ಚಿತ್ರಕ್ಕೆ ‘ಸಿಲ್ಮ್‌ ಸ್ಮಿತಾ – ದಿ ಅನ್‌ಟೋಲ್ಡ್‌ ಸ್ಟೋರಿ’ ಎಂದು ನಾಮಕರಣವಾಗಿದೆ. ನಟಿ, ಮಾಡೆಲ್‌ ಚಂದ್ರಿಕಾ ರವಿ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಖ್ಯಾತ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಸಿನಿಮಾದಲ್ಲಿ ಚಂದ್ರಿಕಾ ರವಿ ನಟಿಸಲಿದ್ದಾರೆ. ‘ಸಿಲ್ಕ್ ಸ್ಮಿತಾ – ದಿ ಅನ್‌ಟೋಲ್ಡ್ ಸ್ಟೋರಿ’ ಶೀರ್ಷಿಕೆಯ ತಮಿಳು ಚಿತ್ರವನ್ನು ಜಯರಾಮ್ ನಿರ್ದೇಶಿಸಲಿದ್ದಾರೆ. ಸಿಲ್ಕ್ ಸ್ಮಿತಾ ಅವರ ಬ್ಲಾಕ್‌ ಅಂಡ್‌ ವೈಟ್‌ ಪೋಸ್ಟರ್‌ನೊಂದಿಗೆ ನಿರ್ಮಾಪಕರು ಚಿತ್ರವನ್ನು ಘೋಷಿಸಿದ್ದಾರೆ. ಸ್ಮಿತಾ ಅವರ 63ನೇ ಹುಟ್ಟುಹಬ್ಬವಾದ ಡಿಸೆಂಬರ್‌ 2ರಂದು ಸಿನಿಮಾ ಘೋಷಣೆಯಾಗಿದೆ. ‘ಕಾಲಾತೀತ ಸುಂದರಿ ಸಿಲ್ಕ್ ಸ್ಮಿತಾ ಅವರಿಗೆ 63ನೇ ಹುಟ್ಟುಹಬ್ಬದ ಶುಭಾಶಯಗಳು. ಆಕೆಯ ಕುಟುಂಬದವರ ಆಶೀರ್ವಾದದೊಂದಿಗೆ, ನಾವು ಆಕೆಯ ಪ್ರಪಂಚವನ್ನು ಹಂಚಿಕೊಳ್ಳಲು ಅಪಾರ ಕೃತಜ್ಞರಾಗಿದ್ದೇವೆ’ ಎಂದು ನಟಿ ಚಂದ್ರಕಾ ರವಿ ತಮ್ಮ X ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ ಸಿಲ್ಕ್‌ ಸ್ಮಿತಾ ತಮ್ಮ ಮನಮೋಹಕ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದವರು. ಅವರ ವೈಯಕ್ತಿಕ ಬದುಕು ಕೂಡ ವರ್ಣರಂಜಿತ. ವಿದ್ಯಾ ಬಾಲನ್ ನಟಿಸಿದ್ದ ‘ದಿ ಡರ್ಟಿ ಪಿಕ್ಚರ್‌’ ಹಿಂದಿ ಸಿನಿಮಾ ಸ್ಮಿತಾ ಬದುಕಿನಿಂದ ಪ್ರೇರಿತವಾದದ್ದೆ. 2013ರ ‘ಸಿಲ್ಕ್ ಸಖತ್ ಹಾಟ್’ ಎಂಬ ಕನ್ನಡ ಚಲನಚಿತ್ರ, ಸನಾ ಖಾನ್ ನಟನೆಯ ಮಲಯಾಳಂ ಚಿತ್ರ ‘ಕ್ಲೈಮ್ಯಾಕ್ಸ್’ ಕೂಡ ಸ್ಮಿತಾ ಅವರ ಜೀವನದಿಂದ ಸ್ಫೂರ್ತಿ ಪಡೆದಿವೆ. ಸಿಲ್ಕ್‌ ಸ್ಮಿತಾ ಮರಣದ ಸುಮಾರು 30 ವರ್ಷಗಳ ನಂತರ ಆಗಾಗ ದೇಶಾದ್ಯಂತ ಚಲನಚಿತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾರೆ.

ಇತ್ತೀಚಿನ ತೆಲುಗು ಚಿತ್ರ ‘ದಸರಾ’ದಲ್ಲಿ ಅವರ ಉಲ್ಲೇಖವಿತ್ತು. ತಮಿಳಿನ ‘ಮಾರ್ಕ್ ಆಂಟೋನಿ’ ಚಿತ್ರದಲ್ಲಿ ನಟಿ ವಿಷ್ಣು ಪ್ರಿಯಾ ಗಾಂಧಿ ಅವರು ಸಿಲ್ಕ್ ಸ್ಮಿತಾ ಅವರನ್ನು ಹೋಲುವ ಪಾತ್ರದಲ್ಲಿ ನಟಿಸಿದ್ದರು. ‘ಸಿಲ್ಕ್ ಸ್ಮಿತಾ – ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 2024ರಲ್ಲಿ ತೆರೆಕಾಣಲಿದೆ. ಚಂದ್ರಿಕಾ ರವಿ ಭಾರತೀಯ ಮೂಲದ ಆಸ್ಟ್ರೇಲಿಯಾದ ನಟಿ, ಮಾಡೆಲ್ ಆಗಿದ್ದು, ಅವರು 2018ರ ‘ಇರುಟ್ಟು ಅರೈಯಿಲ್ ಮುರಟ್ಟು ಕುತ್ತು’ ಮತ್ತು ‘ಸೇಯಂತಹ’ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ತೆರೆಕಂಡ ‘ವೀರ ಸಿಂಹ ರೆಡ್ಡಿ’ ತೆಲುಗು ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.

LEAVE A REPLY

Connect with

Please enter your comment!
Please enter your name here