ವಸಿಷ್ಠ ಬಂಟನೂರು ನಿರ್ದೇಶನ ‘1975’ ಕ್ರೈಂ – ಥ್ರಿಲ್ಲರ್‌ ಸಿನಿಮಾದ ವಿಶೇಷ ಹಾಡಿಗೆ ಸಿಂಧೂ ಲೋಕನಾಥ್‌ ಹೆಜ್ಜೆ ಹಾಕಿದ್ದಾರೆ. ಚಕ್ರವರ್ತಿ ಚಂದ್ರಚೂಡ್‌, ಜಯ್‌ ಶೆಟ್ಟಿ, ಮಾನಸ, ವೆಂಕಟೇಶ್‌ ಪ್ರಸಾದ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ.

ಈ ಹಿಂದೆ ‘ಒನ್ ಲವ್ ಟೂ ಸ್ಟೋರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ‘1975’ ಸಿನಿಮಾ ತಯಾರಾಗಿದೆ. ಕ್ರೈಮ್ ಥ್ರಿಲ್ಲರ್ ಕತೆಯ ಸಿನಿಮಾದ ಪಬ್‌ ಸಾಂಗ್‌ವೊಂದಕ್ಕೆ ನಟಿ ಸಿಂಧೂ ಲೋಕನಾಥ್‌ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. “ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿರುವುದು ಇದೇ ಮೊದಲು. ಸಾಂಗ್ ತುಂಬಾ ಚೆನ್ನಾಗಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹೊಸಬರ ತಂಡವಿದ್ದು ಇಡೀ ಟೀಂಗೆ ಒಳ್ಳೆಯದಾಗಲಿ” ಎಂದು ಸಿಂಧು ಲೋಕನಾಥ್ ಶುಭ ಹಾರೈಸುತ್ತಾರೆ.

“ಸಿಸಿಬಿಗೆ ಸಹಾಯವಾಗುವ, ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿಷಯ ಇದು. ನಿರ್ಮಾಪರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ. ಸ್ಕ್ರಿಪ್ಟ್‌ ತುಂಬಾ ಚೆನ್ನಾಗಿದೆ” ಎನ್ನುತ್ತಾರೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಕ್ರವರ್ತಿ ಚಂದ್ರಚೂಡ್. ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್‌ನಡಿ ದಿನೇಶ್ ರಾಜನ್ ಸಿನಿಮಾ ನಿರ್ಮಿಸಿದ್ದಾರೆ. ಬೆಂಗಳೂರು, ಉಡುಪಿಯಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Previous article‘Jurassic World Dominion’ ಟ್ರೈಲರ್‌ | ಜುರಾಸಿಕ್‌ ಫ್ರಾಂಚೈಸ್‌ನ 6ನೇ ಸಿನಿಮಾ
Next articleZEE5ನಲ್ಲಿ ‘ಕಾಶ್ಮೀರ್‌ ಫೈಲ್ಸ್‌’; ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here