ಎಸ್‌ ಯು ಅರುಣ್‌ ಕುಮಾರ್‌ ನಿರ್ದೇಶನದಲ್ಲಿ ವಿಕ್ರಂ ನಟಿಸಲಿರುವ ನೂತನ ತಮಿಳು ಚಿತ್ರದ ಪ್ರಮುಖ ಪಾತ್ರಕ್ಕೆ ನಟ ಎಸ್‌ ಜೆ ಸೂರ್ಯ ಆಯ್ಕೆಯಾಗಿದ್ದಾರೆ. ‘ಚಿಯಾನ್ 62’ ತಾತ್ಕಾಲಿಕ ಶೀರ್ಷಿಕೆಯಡಿ ಸೆಟ್ಟೇರಿರುವ ಚಿತ್ರಕ್ಕೆ ಜಿ ವಿ ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿಯಾನ್‌ ವಿಕ್ರಮ್ ಅವರ ನೂತನ ತಮಿಳು ಸಿನಿಮಾ ‘ಚಿಯಾನ್ 62’ ತಂಡಕ್ಕೆ ನಟ ಎಸ್‌ ಜೆ ಸೂರ್ಯ ಸೇರ್ಪಡೆಯಾಗಿದ್ದಾರೆ. ಈ ಸಿನಿಮಾವನ್ನು ‘ಚಿತ್ತ’ ತಮಿಳು ಸಿನಿಮಾ ಖ್ಯಾತಿಯ ಎಸ್ ಯು ಅರುಣ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಕುರಿತು HR Pictures ತಮ್ಮ Instagram ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಎಸ್‌ ಜೆ ಸೂರ್ಯ ಸರ್‌ ಅವರನ್ನು ಅತ್ಯಂತ ಪ್ರೀತಿಯಿಂದ ನಾವು ‘ಚಿಯಾನ್‌’ ತಂಡಕ್ಕೆ ಸ್ವಾಗತಿಸುತ್ತೇವೆ’ ಎಂದು ಕ್ಯಾಪ್ಶನ್‌ ನೀಡಿದೆ. ತಾತ್ಕಾಲಿಕವಾಗಿ ‘ಚಿಯಾನ್ 62’ ಶಿರ್ಷಿಕೆಯಿಡಲಾಗಿರುವ ಈ ಚಲನಚಿತ್ರದ ಘೋಷಣಾ ವಿಡಿಯೋವೊಂದನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಸಿನಿಮಾವನ್ನು HR Pictures ಬ್ಯಾನರ್ ಅಡಿಯಲ್ಲಿ ರಿಯಾ ಶಿಬು ನಿರ್ದೇಶಿಸುತ್ತಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್‌ ಸಂಗೀತ ಇರಲಿದೆ.

ಮೊನ್ನೆ ರಿಲೀಸ್‌ ಆದ ಟೀಸರ್‌ನಲ್ಲಿ ತಿರುಟ್ಟಣಿಯ ಪೊಲೀಸ್ ಠಾಣೆಯಲ್ಲಿ ನಡೆದ ದೃಶ್ಯವನ್ನು ತೋರಿಸಿದ್ದು, ದೂರು ದಾಖಲಿಸಲು ಮಹಿಳೆಯೊಬ್ಬರು ಠಾಣೆಗೆ ಧಾವಿಸುತ್ತಾಳೆ. ಮಹಿಳೆ ಬಂದ ಕೆಲವೇ ಕ್ಷಣದಲ್ಲಿ ಇಬ್ಬರು ಗೂಂಡಾಗಳು ಆ ಸ್ಥಳದಲ್ಲಿ ಕಾಣಿಸುತ್ತಾರೆ. ತಕ್ಷಣ ಇವರೇ ಆರೋಪಿಗಳು ಎಂದು ಮಹಿಳೆ ಸೂಚಿಸಿದ ಇಬ್ಬರು ಪುರುಷರನ್ನು ಹೊರಗಿನಿಂದ ಬಂದ ವಿಕ್ರಮ್ ಥಳಿಸಿ ಠಾಣೆಯೊಳಗೆ ನೂಕುತ್ತಾನೆ. ಇನ್ನು ವಿಕ್ರಂ ಅವರ ಎರಡು ದೊಡ್ಡ ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಧ್ರುವ ನಚ್ಚತ್ತಿರಂ’ ಮತ್ತು ಪಾ ರಂಜಿತ್ ನಿರ್ದೇಶನದ ‘ತಂಗಲಾನ್‌’ ಸಿನಿಮಾಗಳಲ್ಲಿ ವಿಕ್ರಂ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here