ಬಹುಭಾಷಾ ನಟ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಅವರು ಕಾಲಿವುಡ್‌ ನಟ ಉಮಾಪತಿ ಅವರನ್ನು ವರಿಸಲಿದ್ದಾರೆ. ತಮಿಳು ನಟ, ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಹೀರೋ ಆಗಿ ಹಲವು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2024ರ ಜನವರಿಯಲ್ಲಿ ವಿವಾಹ ನೆರವೇರಲಿದೆ.

ಕನ್ನಡ ಮೂಲದ ಬಹುಭಾಷಾ ನಟ ಅರ್ಜುನ್ ಸರ್ಜಾ ಜೇಷ್ಠ ಪುತ್ರಿ ಐಶ್ವರ್ಯ ಅರ್ಜುನ್ ಅವರು ತಮಿಳು ನಟ, ನಿರ್ದೇಶಕ ತಂಬಿ ರಾಮಯ್ಯನವರ ಪುತ್ರ ಉಮಾಪತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ಎರಡೂ ಕುಟುಂಬದವರು ಭೇಟಿಯಾಗಿ ಮದುವೆ ಬಗ್ಗೆ ನಿರ್ಧರಿಸಿದ್ದಾರೆ. ‘ಶೀಘ್ರದಲ್ಲೇ ಮದುವೆಯ ದಿನಾಂಕ ನಿಗದಿಪಡಿಸುತ್ತೇವೆ. ಉಮಾಪತಿ ಅವರ ಜನ್ಮದಿನವಾದ ನವೆಂಬರ್ 8ರಂದು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದೇವೆ. ಮದುವೆ ಜನವರಿ 2024ರಲ್ಲಿ ನಡೆಯಲಿದೆ’ ಎಂದು ಅರ್ಜುನ್‌ ಸರ್ಜಾ ತಿಳಿಸಿದ್ದಾರೆ.

ನಟಿ ಐಶ್ವರ್ಯಾ ಅರ್ಜುನ್ 2013ರಲ್ಲಿ ನಟ ವಿಶಾಲ್ ಜೋಡಿಯಾಗಿ ‘ಪಟ್ಟತ್ತು ಯಾನೈ’ ತಮಿಳು ಆಕ್ಷನ್ ಕಾಮಿಡಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 2018ರಲ್ಲಿ ಅರ್ಜುನ್‌ ಸರ್ಜಾ ಅವರು ‘ಪ್ರೇಮ ಬರಹ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಐಶ್ವರ್ಯರನ್ನು ಪರಿಚಯಿಸಿದರು. ಈ ಸಿನಿಮಾ ತಮಿಳಿನಲ್ಲೂ ತಯಾರಾಗಿತ್ತು. ನಟ ಉಮಾಪತಿ 2017ರಲ್ಲಿ ‘ಅಧಗಪ್ಪಟ್ಟತ್ತು ಮಗಜನಂಗಳೆ’ ಚಿತ್ರದ ಮೂಲಕ ತಮಿಳು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರ ತಂದೆ ರಾಮಯ್ಯ ನಿರ್ದೇಶನದ ‘ಮಣಿಯಾರ್ ಕುಟುಂಬಂ’, 2019ರಲ್ಲಿ ‘ತಿರುಮಾನಂ’ ಚಿತ್ರಗಳಲ್ಲಿ ನಟಿಸಿದ್ದ ಅವರು ಕಳೆದ ವರ್ಷ ‘ದೇವದಾಸ್‌’ ಚಿತ್ರಕ್ಕೆ ಸಹಿ ಹಾಕಿದ್ದರು.

ಐಶ್ವರ್ಯ ಸರ್ಜಾ ಅಭಿನಯದ ‘ಪ್ರೇಮಬರಹ’ ಕನ್ನಡ ಸಿನಿಮಾ ಟ್ರೈಲರ್‌
Previous articleಕನ್ನಡ ಚಿತ್ರರಂಗದ ಹಿರಿಯ ಚಿತ್ರಸಾಹಿತಿ, ನಿರ್ದೇಶಕ ಸಿ ವಿ ಶಿವಶಂಕರ್‌ ಇನ್ನಿಲ್ಲ
Next articleಸೋನಂ ಕಪೂರ್‌ ‘ಬ್ಲೈಂಡ್‌’ | JioCinemaದಲ್ಲಿ ಸ್ಟ್ರೀಮ್‌ ಆಗಲಿದೆ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here