ಅನಿಲ್ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ಕ್ರೈಮ್ ಥ್ರಿಲ್ಲರ್ ‘ದಿ ನೈಟ್ ಮ್ಯಾನೇಜರ್ ಸೀಸನ್‌ 2’ ಜೂನ್ 30ರಿಂದ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಇದೇ ವರ್ಷ ಫೆಬ್ರವರಿ 17ರಿಂದ ಸ್ಟ್ರೀಮ್‌ ಆಗಿದ್ದ ಸೀಸನ್‌ 1 ಯಶಸ್ಸಿನ ಹಿನ್ನೆಲೆಯಲ್ಲಿ ಸೀಸನ್‌ 2 ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಬಾಲಿವುಡ್‌ ನಟರಾದ ಅನಿಲ್ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ಕ್ರೈಮ್ ಥ್ರಿಲ್ಲರ್ ‘ದಿ ನೈಟ್ ಮ್ಯಾನೇಜರ್ ಸೀಸನ್‌-2’ ಜೂನ್ 30ರಿಂದ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಶೋಭಿತಾ ಧೂಲಿಪಾಲ, ತಿಲೋತ್ತಮಾ ಶೋಮ್, ರವಿ ಬೆಹ್ಲ್, ರುಖ್ಸರ್ ರೆಹಮಾನ್, ಶಾಶ್ವತ ಚಟರ್ಜಿ, ವರುಣ್ ಶಶಿ ರಾವ್, ಭಾಗವತಿ ಪೆರುಮಾಳ್, ಜಗದೀಶ್ ರಾಜಪುರೋಹಿತ್, ಸಲೀಂ ಸಿದ್ದಿಕಿ ಸರಣಿಯ ಪ್ರಮುಖ ಪಾತ್ರಧಾರಿಗಳು. ಢಾಕಾದ ಐಷಾರಾಮಿ ಹೋಟೆಲ್‌ನ ನೈಟ್ ಮ್ಯಾನೇಜರ್‌ ಆಗಿ ಕೆಲಸ ಮಾಡುವ ಮಾಜಿ ನೌಕಾಪಡೆಯ ಲೆಫ್ಟಿನೆಂಟ್ ಶಾನ್ ಶೇನ್‌ಗುಪ್ತ (ಆದಿತ್ಯ ರಾಯ್‌ ಕಪೂರ್) ಅವರ ಸುತ್ತ ಕತೆ ಸುತ್ತುತ್ತದೆ. ಜಾನ್ ಲೆ ಕ್ಯಾರೆ ಅವರ ಕಾದಂಬರಿ ಆಧರಿಸಿದ ಬ್ರಿಟಿಷ್ ಶೋ ‘ದಿ ನೈಟ್ ಮ್ಯಾನೇಜರ್‌’ ಹಿಂದಿ ಅವತರಣಿಕೆಯಿದು. ಸೀಸನ್ – 1 ಇದೇ ವರ್ಷ ಫೆಬ್ರವರಿ 17ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದಿತ್ತು. ಸರಣಿಯನ್ನು ಪ್ರಿಯಾಂಕಾ ಘೋಸ್, ರುಖ್ ನಬೀಲ್ ಮತ್ತು ಸಂದೀಪ್ ಮೋದಿ ನಿರ್ದೇಶಿಸಿದ್ದು, ಅಮೃತಾ ಸೇನ್ ಮತ್ತು ಪ್ರೀತಿ ಜಿಂಟಾ ನಿರ್ಮಿಸಿದ್ದಾರೆ. ಶಿಮ್ಲಾ, ಜೈಸಲ್ಮೇರ್, ದೆಹಲಿ, ಮುಂಬೈ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಚಿತ್ರೀಕರಣ ನಡೆದಿದೆ.

Previous articleಸೋನಂ ಕಪೂರ್‌ ‘ಬ್ಲೈಂಡ್‌’ | JioCinemaದಲ್ಲಿ ಸ್ಟ್ರೀಮ್‌ ಆಗಲಿದೆ ಹಿಂದಿ ಸಿನಿಮಾ
Next article‘ದಿ ಕೇರಳ ಸ್ಟೋರಿ’ ಟೀಮ್‌ನಿಂದ ನೂತನ ಸಿನಿಮಾ ‘ಬಸ್ತಾರ್‌’ ಘೋಷಣೆ

LEAVE A REPLY

Connect with

Please enter your comment!
Please enter your name here