ಜಾನ್ ವ್ಯಾಟ್ಸ್ ನಿರ್ದೇಶನದ ‘ಸ್ಪೈಡರ್‌ಮ್ಯಾನ್ ನೋ ವೇ ಹೋಮ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಆಲ್ಫ್ರೆಡ್‌ ಮೊಲಿನಾರ ಡಾಕ್ಟರ್ ಆಕ್ಟೋಪಸ್‌, ವಿಲ್ಲೆಮ್ ಡೆಫೋ ಅವರ ಗ್ರೀನ್ ಗೋಬ್ಲಿನ್, ಜೇಮಿ ಫಾಕ್ಸ್ ಹೊಸ ಲುಕ್‌, ಸ್ಯಾಂಡ್‌ಮ್ಯಾನ್‌ ಪಾತ್ರಗಳು ಟ್ರೈಲರ್‌ನಲ್ಲಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ.

ಟಾಮ್ ಹಾಲೆಂಡ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸ್ಪೈಡರ್‌ಮ್ಯಾನ್‌ ನೋ ವೇ ಹೋಮ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದಿನ ‘ಸ್ಪೈಡರ್‌ಮ್ಯಾನ್‌: ಫಾರ್ ಫ್ರಮ್ ಹೋಮ್‌’ ಚಿತ್ರದಲ್ಲಿ ಸ್ಪೈಡರ್‌ಮ್ಯಾನ್‌ ಐಡೆಂಟಿಟಿ ರಿವೀಲ್ ಆಗಿತ್ತು. ಈಗ ನೂತನ ಸಿನಿಮಾದಲ್ಲಿ ಸ್ಪೈಡರ್‌ಮ್ಯಾನ್‌ ಸಾಹಸಗಳು ಇರಲಿವೆ. ಆಲ್ಫ್ರೆಡ್‌ ಮೊಲಿನಾರ ಡಾಕ್ಟರ್ ಆಕ್ಟೋಪಸ್‌, ವಿಲಿಯಂ ಡೆಫೋ ಅವರ ಗ್ರೀನ್ ಗಾಬ್ಲಿನ್‌, ಜೇಮಿ ಫಾಕ್ಸ್‌ ನಟನೆಯ ಎಲೆಕ್ಟ್ರೋ ಮತ್ತು ಸ್ಯಾಂಡ್‌ಮ್ಯಾನ್‌ ಪಾತ್ರಗಳನ್ನೂ ಇಲ್ಲಿ ನಾವು ನೋಡಬಹುದು. ಸಿನಿಮಾದಲ್ಲಿ ಹಲವು ಅಚ್ಚರಿಗಳು ಇರಲಿವೆ ಎನ್ನುವುದನ್ನು ಟ್ರೈಲರ್ ಹೇಳುತ್ತಿದೆ. ಖಳಪಾತ್ರಗಳ ಜೊತೆ ಈ ಹಿಂದೆ ಸ್ಪೈಡರ್‌ಮ್ಯಾನ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಟಾಬೆ ಮ್ಯಾಗ್ಯೂರ್‌, ಆಂಡ್ರ್ಯೂ ಗಾರ್‌ಫೀಲ್ಡ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಯಿದೆ. ಆದರೆ ಟ್ರೈಲರ್‌ನಲ್ಲಿ ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ‘ಸ್ಪೈಡರ್‌ಮ್ಯಾನ್‌: ನೋ ವೇ ಹೋಮ್‌’ ಚಿತ್ರದ ಡಾಕ್ಟರ್ ಸ್ಟ್ರೇಂಜ್ ಪಾತ್ರದಲ್ಲಿ ಬೆನಡಿಕ್ಟ್‌ ಕುಂಬರ್‌ಬ್ಯಾಚ್‌ ನಟಿಸಿದ್ದಾರೆ. ಜಾನ್ ವ್ಯಾಟ್ಸ್‌ ನಿರ್ದೇಶನದ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಝೆಂದಯಾ, ಜ್ಯಾಕೋಬ್‌ ಬ್ಯಾಟಲೋನ್‌ ನಟಿಸಿದ್ದಾರೆ. ಇದೇ ವರ್ಷ ಡಿಸೆಂಬರ್‌ 17ರಂದು ಸಿನಿಮಾ ತೆರೆಕಾಣಲಿದೆ.

Previous articleಪುನೀತ್‌ಗೆ ‘ಕರ್ನಾಟಕ ರತ್ನ’; ಅಗಲಿದ ನಟನಿಗೆ ಆತ್ಮೀಯ ನಮನ
Next articleಡಾರ್ಕ್ ಥ್ರಿಲ್ಲರ್ ‘ವೆಡ್ಡಿಂಗ್ ಗಿಫ್ಟ್’; ಲಾಯರ್ ಪಾತ್ರದಲ್ಲಿ ನಟಿ ಪ್ರೇಮಾ

LEAVE A REPLY

Connect with

Please enter your comment!
Please enter your name here