ಜಗ್ಗೇಶ್‌ ಅಭಿನಯದ ‘ತೋತಾಪುರಿ’ ಚಿತ್ರದ ಟ್ರೈಲರನ್ನು ನಟ ಸುದೀಪ್‌ ಬಿಡುಗಡೆ ಮಾಡಿದರು. ವಿಜಯಪ್ರಸಾದ್‌ ನಿರ್ದೇಶನದ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಲಿದ್ದು, ಫಸ್ಟ್‌ ಪಾರ್ಟ್‌ ಜೂನ್‌ ಮೊದಲ ವಾರದಲ್ಲಿ ತೆರೆಕಾಣಲಿದೆ.

ವಿಜಯ ಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಟಿಸುತ್ತಿರುವ ‘ತೋತಾಪುರಿ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಎಂದಿನಂತೆ ಟ್ರೈಲರ್‌ನಲ್ಲಿ ವಿಜಯಪ್ರಸಾದ್‌ ಫ್ಲೇವರ್‌ ಇದ್ದು, ಸಂಭಾಷಣೆ, ನಟ-ನಟಿಯರ ಮ್ಯಾನರಿಸಂ ಕಚಗುಳಿ ಇಡುತ್ತದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಹಾಗಾಗಿ ‘ತೋತಾಪುರಿ’ ಪ್ಯಾನ್‌ಇಂಡಿಯಾ ಚಿತ್ರವಾಗಲಿದೆ. ಆದರೆ ಚಿತ್ರತಂಡ ಇದನ್ನು ಒಪ್ಪುತ್ತಿಲ್ಲ. ‘ದೇವ್ರಾಣೆಗೂ ನಮ್ದು PAN INDIA ಸಿನಿಮಾ ಅಲ್ಲ. ನಮ್ದು ‘ಬರೀ’ ಸಿನಿಮಾ!’ ಎಂದು ಪೋಸ್ಟರ್ ಮೇಲೆ ಹಾಕಿದ್ದರು! ಈ ಮೂಲಕ ನಿರ್ದೇಶಕ ವಿಜಯಪ್ರಸಾದ್‌ ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದ್ದಾರೆ.

‘ನೀರ್ ದೋಸೆ’ ಚಿತ್ರದಲ್ಲಿ ನಿರ್ದೇಶಕ ವಿಜಯಪ್ರಸಾದ್ ಮತ್ತು ನಟ ಜಗ್ಗೇಶ್‌ಮೋಡಿ ಮಾಡಿದ್ದರು. ತರ್ಲೆ ಮಾತುಗಳಲ್ಲೇ ಫಿಲಾಸಫಿ ಹೇಳುವ ಪ್ರಯತ್ನವಿದು. ‘ತೋತಾಪುರಿ’ ಚಿತ್ರದಲ್ಲೂ ಈ ಶೈಲಿ ಮುಂದುವರೆಯಬಹುದು ಎನ್ನುವುದು ಜಗ್ಗೇಶ್ ಅಭಿಮಾನಿಗಳ ನಿರೀಕ್ಷೆ. ಮೊದಲು ಕನ್ನಡದಲ್ಲಷ್ಟೇ ಎಂದು ಶುರುವಾದ ಸಿನಿಮಾ ಈಗ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎರಡು ಭಾಗಗಳಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನುವುದು ಮತ್ತೊಂದು ವಿಶೇಷ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಜನರಿಗೆ ಇಷ್ಟವಾಗಿವೆ. ಈಗ ಪ್ಯಾನ್ ಇಂಡಿಯಾ ಟ್ಯಾಗ್‌ ಸೇರಿಕೊಂಡಿದೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರದ ಇತರೆ ಪ್ರಮುಖ ತಾರಾಬಳಗದಲ್ಲಿ ಅದಿತಿ ಪ್ರಭುದೇವ, ಧನಂಜಯ, ಸುಮನ್ ರಂಗನಾಥ್ ಇದ್ದಾರೆ.

LEAVE A REPLY

Connect with

Please enter your comment!
Please enter your name here