ಅಕ್ಕಿನೇನಿ ನಾಗ ಚೈತನ್ಯ ಅಮೇಜಾನ್ ಪ್ರೈಮ್‍ ಓರಿಜಿನಲ್ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಮ್ ಕೆ. ಕುಮಾರ್ ಸಾರಥ್ಯದಲ್ಲಿ 2022ಕ್ಕೆ ವೀಕ್ಷಕರಿಗೆ ಸಿಗಲಿದೆ. ನಾಗ ಚೈತನ್ಯಗೆ ತಮಿಳು ನಟಿ ಪ್ರಿಯಾ ಭವಾನಿ ಶಂಕರ್‌ ನಾಯಕಿಯಾಗಲಿದ್ದಾರೆ.

ನಾಗ ಚೈತನ್ಯ ಮತ್ತು ಪ್ರಿಯಾ ಭವಾನಿ ಶಂಕರ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ವೆಬ್ ಸರಣಿಗೆ ಇನ್ನು ಹೆಸರಿಟ್ಟಿಲ್ಲ. ಇದೊಂದು ಹಾರರ್‍ ಡ್ರಾಮಾ ಸೀರೀಸ್ ಎನ್ನಲಾಗಿದೆ. ಇಲ್ಲಿಯವರೆಗೆ ದೊಡ್ಡ ಪರದೆಯ ಮೇಲೆ ನಾಗಚೈತನ್ಯರನ್ನು ನೋಡಿದ್ದ ಅವರ ಅಭಿಮಾನಿಗಳಿಗೆ ವೆಬ್‌ ಸರಣಿಯಲ್ಲಿ ತಮ್ಮ ಹೀರೋ ಹೇಗೆ ಕಾಣಿಸಬಹುದೆನ್ನುವ ಕುತೂಹಲವಿದೆ. ಪ್ರಿಯಾ ಭವಾನಿ ಶಂಕರ್ ಅವರು ನಾಗ ಚೈತನ್ಯರೊಂದಿಗೆ ನಟಿಸುತ್ತಿರುವ ಮೊದಲ ತಮಿಳು ನಟಿ. ಇವರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ವೆಬ್ ಸೀರೀಸ್‍ ಶೀರ್ಷಿಕೆಯನ್ನು ಅತಿ ಶೀಘ್ರದಲ್ಲೇ ಘೋಷಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.

ಸಮಂತಾರಿಂದ ಬೇರ್ಪಟ್ಟ ನಂತರ ನಟನೆಗೆ ಸಂಬಂಧಿಸಿದಂತೆ ನಾಗ ಚೈತನ್ಯ ಕುರಿತ ಹೊಸ ಅಪ್‌ಡೇಟ್‌ ಇದು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತಿಂಗಳುಗಳ ಹಿಂದೆ ಸಾಯಿ ಪಲ್ಲವಿ ಜೊತೆಗಿನ ಅವರ ‘ಲವ್‌ಸ್ಟೋರಿ’ ತೆಲುಗು ಸಿನಿಮಾ ತೆರೆಕಂಡಿತ್ತು. ಸದ್ಯ ನಾಗ ಚೈತನ್ಯ ‘ಬಂಗಾರರಾಜು’ ತೆಲುಗು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ತಂದೆ ನಾಗಾರ್ಜುನ ನಟನೆಯ ಚಿತ್ರವಿದು. ಈ ಸಿನಿಮಾದಲ್ಲಿ ನಾಗಾರ್ಜುನ ಅವರಿಗೆ ರಮ್ಯಕೃಷ್ಣ ಜೋಡಿಯಾಗಿದ್ದಾರೆ.

LEAVE A REPLY

Connect with

Please enter your comment!
Please enter your name here