ಶ್ರೀನಿ ನಟನೆಯ ‘ON AIR’ ಸಿನಿಮಾ ಸದ್ದಿಲ್ಲದೆ ಪೂರ್ಣಗೊಂಡಿದೆ. ಚಿತ್ರದಲ್ಲಿ ಅವರು RJ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾದ ಲೇಖಕ ವಿಜಯೇಂದ್ರ ಪ್ರಸಾದ್ ಸಹಾಯಕರಾಗಿದ್ದ ಪ್ರಶಾಂತ್ ಸಾಗರ್ ಚಿತ್ರದ ನಿರ್ದೇಶಕ.

‘ಓಲ್ಡ್‌ಮಾಂಕ್‌’ ಸಿನಿಮಾ ಖ್ಯಾತಿಯ ನಟ ಶ್ರೀನಿ ಸದ್ಯ ಶಿವರಾಜಕುಮಾರ್‌ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ನೂತನ ಸಿನಿಮಾಗೆ ‘ÓN AIR’ ಎಂದು ಶೀರ್ಷಿಕೆ ನಿಗದಿಯಾಗಿದ್ದು, ಚಿತ್ರದಲ್ಲಿ ಶ್ರೀನಿ RJ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಫರೆಂಟ್ ಟೈಟಲ್ ಸಿನಿಮಾ ಥ್ರಿಲ್ಲರ್ ಕಥಾನಕದ ಕಂಟೆಂಟ್ ಹೊಂದಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಜುಲೈನಲ್ಲಿ ನೇರವಾಗಿ OTTಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಈ ಸಿನಿಮಾದ ಸ್ಪೆಷಾಲಿಟಿ ಅಂದರೆ ರಾಜಮೌಳಿ ತಂದೆ, ‘ಬಾಹುಬಲಿ’ ಸಿನಿಮಾದ ಲೇಖಕ ವಿಜಯೇಂದ್ರ ಪ್ರಸಾದ್ ಅಸೋಸಿಯೇಟ್ ಆಗಿದ್ದ ಪ್ರಶಾಂತ್ ಸಾಗರ್ ಸಿನಿಮಾ ನಿರ್ದೇಶಿಸಿದ್ದಾರೆ. ರಘುವೀರ್ ಗೋರಿಪತಿ ಮತ್ತು ಸೃಜನ್ ಯರಬೋಲು ಈ ಚಿತ್ರದ ನಿರ್ಮಾಪಕರು.

LEAVE A REPLY

Connect with

Please enter your comment!
Please enter your name here