ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಸಹಾಯಕರಾಗಿ ಆರು ವರ್ಷ ಕೆಲಸ ಮಾಡಿರುವ ಕಿಶೋರ್‌ ಭಾರ್ಗವ್‌ ನಿರ್ದೇಶನದ ‘ಸ್ಟಾಕರ್‌’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ ಮಾರ್ಚ್‌ 31ರಂದು ತೆರೆಕಾಣಲಿದೆ.

ಸ್ಟಾಕರ್ ಸಿನಿಮಾ ಫಸ್ಟ್ ಲುಕ್ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಈಗ ರಿಲೀಸ್ ಆಗಿರುವ ಟ್ರೈಲರ್‌ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಗಂಡ, ಹೆಂಡತಿ, ಮಗಳನ್ನೊಳಗೊಂಡ ಸುಂದರ ಕುಟುಂಬ. ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಮಗಳ ಬದುಕಿಗೆ ಖಳನೊಬ್ಬನ ಪ್ರವೇಶವಾಗುತ್ತದೆ. ಆ ವಿಲನ್ ಮತ್ತೆ ಹಚ್ಚಲು ಬರುವ ಉಗ್ರ ನಿಗ್ರಹ ಪಡೆ. ಇದು ಸ್ಟಾಕರ್ ಟ್ರೈಲರ್‌ ಹೈಲೈಟ್‌. ಸಸ್ಪೆನ್ಸ್ – ಥ್ರಿಲ್ಲರ್‌ ಸಿನಿಮಾ ತೆರೆಗೆ ಸಿದ್ಧವಾಗಿದ್ದು ಪ್ರೊಮೋಷನ್‌ ಶುರುವಾಗಿದೆ.

‘ಸ್ಟಾಕರ್’ ಸಿನಿಮಾದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನಗರ್‌ಕರ್, ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿ ಶಂಕರ್ ದೇಸಾಯಿ ನಟಿಸಿದ್ದಾರೆ. ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸಿನಿಮಾವನ್ನು ಎಂ.ಎನ್.ವಿ.ರಮಣ,  ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣ ಮಾಡಿದ್ದಾರೆ. ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿ.ಆರ್.ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ. ಮಾರ್ಚ್ 31ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here