ಇತ್ತೀಚೆಗೆ ಸೆಟ್ಟೇರಿದ ನಟ ಅನಿರುದ್ಧ್‌ ನೂತನ ಸಿನಿಮಾಗೆ ‘Chef ಚಿದಂಬರ’ ಎನ್ನುವ ಶೀರ್ಷಿಕೆ ಫಿಕ್ಸ್‌ ಆಗಿದೆ. ಈ ಹಿಂದೆ ‘ರಾಘು’ ಚಿತ್ರ ನಿರ್ದೇಶಿಸಿದ್ದ ಎಂ ಆನಂದರಾಜ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಡಾರ್ಕ್‌ ಕಾಮಿಡಿ ಜಾನರ್‌ನ ಚಿತ್ರದ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ರಚೆಲ್‌ ಡೇವಿಡ್‌ ಇದ್ದಾರೆ.

ಐದು ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿರುವ ನಟ ಅನಿರುದ್ಧ ನೂತನ ಸಿನಿಮಾಗೆ ‘Chef ಚಿದಂಬರ’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ನಟ ಸುದೀಪ್‌ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ಈ ಹಿಂದೆ ವಿಜಯ ರಾಘವೇಂದ್ರ ನಟನೆಯ ‘ರಾಘು’ ಸಿನಿಮಾ ಮಾಡಿದ್ದ ಎಂ ಆನಂದರಾಜ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದೊಂದು ಡಾರ್ಕ್‌ ಕಾಮಿಡಿ ಜಾನರ್‌ ಸಿನಿಮಾ ಎನ್ನುತ್ತಾರೆ ಆನಂದರಾಜ್‌. ಇದೇ ತಿಂಗಳ ಹತ್ತರಿಂದ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ ಎನ್ ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ದೇಶಕರೇ ಕತೆ ಬರೆದಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆ ಗಣೇಶ್‌ ಪರಶುರಾಮ್‌ ಅವರದ್ದು. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ. ‘ವಿಕ್ರಾಂತ್ ರೋಣ’ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಮತ್ತು ಮಾಧುರಿ ಪರಶುರಾಮ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್‌, ಶಿವಮಣಿ ಮುಂತಾದವರು ಚಿತ್ರದ ಇತರೆ ಪ್ರಮುಖ ಕಲಾವಿದರು.

Previous article‘ಸ್ಕಂದ’ ಸಾಂಗ್‌ | ರಾಮ್‌ – ಶ್ರೀಲೀಲಾ ತೆಲುಗು ಸಿನಿಮಾ ಸೆಪ್ಟೆಂಬರ್‌ 15ಕ್ಕೆ ತೆರೆಗೆ
Next articleಈ ವಾರ OTT | ಕಾಶ್ಮೀರ್‌ ಫೈಲ್ಸ್‌, ಪೋರ್‌ ಥೋನ್ಸಿಲ್‌, ಕಮ್ಯಾಂಡೋ, Made in heaven 2

LEAVE A REPLY

Connect with

Please enter your comment!
Please enter your name here