ಅಮೀರ್‌ ಖಾನ್‌ ನಿರ್ಮಾಣದ ‘ಲಾಹೋರ್‌ 1947’ ಹಿಂದಿ ಚಿತ್ರದಲ್ಲಿ ಸನ್ನಿ ಡಿಯೋಲ್‌ ಹೀರೋ ಆಗಿ ನಟಿಸಲಿದ್ದಾರೆ. ದೇಶ ವಿಭಜನೆ ಕುರಿತ ಕಥಾವಸ್ತು ಹೊಂದಿರುವ ಈ ಚಿತ್ರವನ್ನು ರಾಜ್‌ಕುಮಾರ್‌ ಸಂತೋಷಿ ನಿರ್ದೇಶಿಸಲಿದ್ದಾರೆ.

‘ಗದರ್ 2’ ಚಿತ್ರದ ದೊಡ್ಡ ಯಶಸ್ಸಿನ ನಂತರ ಸನ್ನಿ ಡಿಯೋಲ್ ಅವರ ಮುಂದಿನ ಯೋಜನೆ ಘೋಷಣೆಯಾಗಿದೆ. ಈ ಯೋಜನೆಗೆ ‘ಲಾಹೋರ್‌ 1947’ ಎನ್ನುವ ಶೀರ್ಷಿಕೆ ಇಡಲಾಗಿದೆ. ರಾಜ್‌ಕುಮಾರ್ ಸಂತೋಷಿ ಈ ಸಿನಿಮಾ ನಿರ್ದೇಶಿಸಲಿದ್ದು ಅಮೀರ್ ಖಾನ್ ನಿರ್ಮಿಸಲಿದ್ದಾರೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷದಲ್ಲಿ ಬ್ರಿಟಿಷರು ನಿರ್ಗಮಿಸುವ ಮೊದಲು ಭಾರತ ಎರಡು ದೇಶಗಳಾಗಿ ವಿಭಜನೆಯಾದ ಕುರಿತು ಚಲನಚಿತ್ರವು ತೆರೆದಿಡಲಿದೆ. ಇದನ್ನು ಪ್ರಕಟಿಸಿದ ಸನ್ನಿ ಡಿಯೋಲ್ ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್ ಜಂಟಿ ಹೇಳಿಕೆಯನ್ನು ನೀಡಿವೆ. ”AKP (Aamir Khan Productions) ನ ಇಡೀ ತಂಡವು ರಾಜ್ ಕುಮಾರ್ ಸಂತೋಷಿ ನಿರ್ದೇಶಿಸಲಿರುವ ‘ಲಾಹೋರ್ 1947′ ಸಿನಿಮಾದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿರುವುದಕ್ಕೆ ಉತ್ಸುಕರಾಗಿದ್ದೇವೆ. ಖ್ಯಾತ ಕಲಾವಿದ ಸನ್ನಿಯೊಂದಿಗೆ ಈ ಯೋಜನೆಯ ಭಾಗವಾಗಿರುವುದು ಸಂತಸ ತಂದಿದೆ. ನೆಚ್ಚಿನ ನಿರ್ದೇಶಕರಾದ ರಾಜ್ ಸಂತೋಷಿ ಜೊತೆಗೆ ಆರಂಭಿಸಿರುವ ಈ ಪಯಣ ಅತ್ಯಂತ ಭರವಸೆಯ ಯೋಜನೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ನಾವು ಬಯಸುತ್ತೇವೆ’ ಎಂದು X (Twitter) ನಲ್ಲಿ ಅಮೀರ್‌ ಖಾನ್‌ ಬರೆದುಕೊಂಡಿದ್ದಾರೆ. ಸನ್ನಿ ಡಿಯೋಲ್ ವೃತ್ತಿ ಬದುಕಿಗೆ ಬ್ಲಾಕ್‌ಬಸ್ಟರ್ ಚಿತ್ರ ‘ಗದರ್ 2’ ತಿರುವು ನೀಡಿದೆ. 2023ರ ಆಗಸ್ಟ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರೀತಿ, ಮೆಚ್ಚುಗೆಯನ್ನು ಪಡೆಯಿತು. ಅನಿಲ್‌ ಶರ್ಮಾ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಅಮಿಶಾ ಪಟೇಲ್‌ ನಟಿಸಿದ್ದಾರೆ.

https://x.com/AKPPL_Official/status/1709095697944056062?s=20

LEAVE A REPLY

Connect with

Please enter your comment!
Please enter your name here