2001ರ ಬ್ಲಾಕ್‌ ಬಸ್ಟರ್‌ ಸಿನಿಮಾ ‘ಗದ್ದರ್‌’ ಸೀಕ್ವೆಲ್‌ಗೆ ಚಿತ್ರೀಕರಣ ನಡೆಯುತ್ತಿದ್ದು ಹೀರೋ ಸನ್ನಿ ಡಿಯೋಲ್‌ ಫಸ್ಟ್‌ ಲುಕ್‌ ಹಂಚಿಕೊಂಡಿದ್ದಾರೆ. ಅನಿಲ್‌ ಶರ್ಮಾ ನಿರ್ದೇಶನದ ಚಿತ್ರದಲ್ಲಿ ಅಮೀಶಾ ಪಟೇಲ್‌ ಮತ್ತು ಉತ್ಕರ್ಶ್‌ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

2021ರ ಜೂನ್‌ಗೆ ‘ಗದ್ದರ್‌’ ಹಿಂದಿ ಸಿನಿಮಾ ತೆರೆಕಂಡು 20 ವರ್ಷಗಳಾಗಿತ್ತು. ಮೂಲ ಸಿನಿಮಾ ನಿರ್ದೇಶಕರ ನೇತೃತ್ವದಲ್ಲೇ ಹೀರೊ ಸನ್ನಿಡಿಯೋಲ್‌ ಅಕ್ಟೋಬರ್‌ನಲ್ಲಿ ‘ಗದ್ದರ್‌ 2’ ಘೋಷಿಸಿದ್ದರು. ಈಗ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸನ್ನಿ ತಮ್ಮ ಜನಪ್ರಿಯ ‘ತಾರಾ ಸಿಂಗ್‌’ ಪಾತ್ರದ ಫಸ್ಟ್‌ ಲುಕ್‌ ಹಂಚಿಕೊಂಡಿದ್ದಾರೆ.”ಜನಪ್ರಿಯ ಪಾತ್ರಗಳನ್ನು ಮತ್ತೆ ತೆರೆಗೆ ತರಲು ತುಂಬಾ ಅದೃಷ್ಟ ಬೇಕು. ಎರಡು ದಶಕಗಳ ನಂತರ ಮತ್ತೊಮ್ಮೆ ‘ತಾರಾಸಿಂಗ್‌’ ಪಾತ್ರವನ್ನು ನಿಮ್ಮೆದುರು ತರುತ್ತಿದ್ದೇವೆ. ಇದೀಗ ಚಿತ್ರದ ಮೊದಲ ಹಂತದ ಶೂಟಿಂಗ್‌ ಮುಕ್ತಾಯವಾಗಿದೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದು ಫಸ್ಟ್‌ಲುಕ್‌ ಹಂಚಿಕೊಂಡಿದ್ದಾರೆ ಸನ್ನಿ ಡಿಯೋಲ್‌. ಮೂಲ ಚಿತ್ರದಲ್ಲಿ ನಟಿಸಿದ್ದ ಅಮೀಶಾ ಪಟೇಲ್‌ ಸೀಕ್ವೆಲ್‌ನಲ್ಲೂ ಇರುವುದು ವಿಶೇಷ. ಅವರು ಕೂಡ ಚಿತ್ರೀಕರಣದ ಕೆಲವು ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here