ಬಾಲಿವುಡ್ ತಾರೆಯರಾದ ಸನ್ನಿ ಲಿಯೋನ್, ನೀಲ್ ನಿತಿನ್ ಮುಖೇಶ್, ಇಶಾ ಗುಪ್ತಾ ‘ಗ್ಲಾಮ್ ಫೇಮ್’ ರಿಯಾಲಿಟಿ ಶೋ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವನ್ನು Whatever Productions ಮತ್ತು Krishna Kunj Production ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸರಣಿಯು ಶೀಘ್ರದಲ್ಲೇ JioCinema ದಲ್ಲಿ ಸ್ಟ್ರೀಮ್ ಆಗಲಿದೆ.
‘ಗ್ಲಾಮ್ ಫೇಮ್’ ರಿಯಾಲಿಟಿ ಶೋ ತೀರ್ಪುಗಾರರಾಗಿ ಬಾಲಿವುಡ್ ತಾರೆಯರಾದ ಸನ್ನಿ ಲಿಯೋನ್, ನೀಲ್ ನಿತಿನ್ ಮುಖೇಶ್, ಇಶಾ ಗುಪ್ತಾ ಆಯ್ಕೆಯಾಗಿದ್ದಾರೆ. ‘ಗ್ಲಾಮ್ ಫೇಮ್’ ಮೊದಲ ಸೀಸನ್ 10-12 ನಿಯಮಿತ ಸಂಚಿಕೆಗಳಲ್ಲಿ ಪ್ರಸಾರವಾಗುತ್ತದೆ. ಇದು ಮಾಡೆಲ್‌ಗಳ ಪ್ರತಿಭೆಯನ್ನು ಪೋಷಿಸಲು ಅವರದೇ ಶೈಲಿಯಲ್ಲಿ ಇತರ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಲು ಮೀಸಲಾಗಿರುವ ವೇದಿಕೆ. ಈ ಸ್ಪರ್ಧೆಯು ಕಠಿಣ ಡಿಜಿಟಲ್ ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಭಾರತದೆಲ್ಲೆಡೆ ಮಹತ್ವಾಕಾಂಕ್ಷಿ ಅಭ್ಯರ್ಥಿಗಳನ್ನು ನಿಖರವಾಗಿ ಆಯ್ಕೆ ಮಾಡಲಾಗುತ್ತದೆ. ಮತ್ತು 12 ಪ್ರಮುಖ ನಗರಗಳಲ್ಲಿ ವೈಯಕ್ತಿಕ ಸಂದರ್ಶನಗಳು ಮತ್ತು ಗುಂಪು ಚರ್ಚೆಯ ಸುತ್ತುಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಸುತ್ತುಗಳಲ್ಲಿ ಆಯ್ಕೆಯಾದವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಪ್ರತಿ ಹಂತದಲ್ಲೂ ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಗೌರವಾನ್ವಿತ ಮಾರ್ಗದರ್ಶಕರಾದ ರೋಹಿತ್ ಖಂಡೇಲ್ವಾಲ್, ಸಂತೋಷಿ ಶೆಟ್ಟಿ, ದಿನೇಶ್ ಶೆಟ್ಟಿ, ಮತ್ತು ಹೆಸರಾಂತ ಫ್ಯಾಷನ್ ಛಾಯಾಗ್ರಾಹಕ ಡಬ್ಬೂ ರತ್ನಾನಿ ಅವರು ಶೋನಲ್ಲಿ ಭಾಗವಹಿಸಲಿದ್ದಾರೆ. ಸರಣಿಯ ಉದ್ದಕ್ಕೂ Grooming, Fitness, Portfolio development ಮತ್ತು Choreography ಕುರಿತು ಸ್ಪರ್ಧಿಗಳು ಕಠಿಣ ಸ್ಪರ್ಧೆ ಎದುರಿಸುತ್ತಾರೆ. ಈ ಕಾರ್ಯಕ್ರಮವನ್ನು Whatever Productions ಮತ್ತು Krishna Kunj Production ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸರಣಿಯು ಶೀಘ್ರದಲ್ಲೇ JioCinema ದಲ್ಲಿ ಸ್ಟ್ರೀಮ್ ಆಗಲಿದೆ.