ಸ್ಯಾಂಡಲ್‌ವುಡ್‌ನ ಜನಪ್ರಿಯ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಭೂಷಣ್‌ ಚಿತ್ರನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಅವರು ಪುಟ್ಟ ವೀಡಿಯೊವೊಂದನ್ನು ರಿಲೀಸ್‌ ಮಾಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

ನಟಸಾರ್ವಭೌಮ, ಬೆಲ್ ಬಾಟಂ, ರಾಬರ್ಟ್ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿರುವ ಭೂಷಣ್‌ ಚಿತ್ರನಿರ್ದೇಶನಕ್ಕಿಳಿಯುತ್ತಿದ್ದಾರೆ. ಚುಟು ಚುಟು ಅಂತೈತಿ, ಸಿಂಗಾರ ಸಿರಿಯೇ, ಕಣ್ಣು ಹೊಡಿಯಾಕ… ಅವರ ಕೆಲವು ಜನಪ್ರಿಯ ನೃತ್ಯ ಸಂಯೋಜನೆಗಳು. ‘ರಾಜ ರಾಣಿ ರೋರರ್ ರಾಕೆಟ್’ ಸಿನಿಮಾ ಮೂಲಕ ಹೀರೋ ಆಗಿದ್ದ ಅವರೀಗ ನಿರ್ದೇಶನಕ್ಕೆ ತಯಾರಿ ನಡೆಸಿದ್ದಾರೆ. ಇದಕ್ಕೆ ತಯಾರಿ ಎನ್ನುವಂತೆ ಅವರಿಂದ ಒಂದು ವೀಡಿಯೋ ರಿಲೀಸ್‌ ಆಗಿದೆ. ತಮಾಷೆ ಮತ್ತು ಕ್ರಿಯೇಟಿವ್‌ ಆಗಿ ರೂಪಿಸಿರುವ ಈ ವೀಡಿಯೋದಲ್ಲಿ ನಿರ್ದೇಶಕರಾಗಲು ಅವರು ನಡೆಸುತ್ತಿರುವ ತಯಾರಿಯ ಚಿತ್ರಣಿವದೆ. ಯಾವ ಸಿನಿಮಾ? ಯಾವ ಜಾನರ್? ಹೀರೋ? ಮತ್ತಿತರ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಸದ್ಯ ಕತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಡಾಕ್ಟರ್, ಇಂಜಿನಿಯರ್ ಆಗಲು ಕೋರ್ಸ್ ಬೇಕು. ಆದರೆ ಡೈರೆಕ್ಟರ್ ಆಗಲು ಫೋರ್ಸ್ ಇರಬೇಕು’ ಎನ್ನುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here