ಪ್ರಿನ್ಸೆಸ್‌ ಡಯಾನಾರ ಜೀವನಾಧಾರಿತ ಚಿತ್ರ ‘ಸ್ಪೆನ್ಸರ್’. ಚಿತ್ರದಲ್ಲಿ ಕ್ರಿಸ್ಟೆನ್ ಸ್ಟೀವರ್ಟ್ ಅವರು ಡಯಾನಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ‘ಸ್ಪೆನ್ಸರ್’ ಚಿತ್ರ ನಾಳೆ ನವೆಂಬರ್ 19ರಂದು ಭಾರತದಲ್ಲಿ ತೆರೆಕಾಣಲಿದೆ.

‘ಸ್ಪೆನ್ಸರ್’ ಚಿತ್ರ ಪ್ರಿನ್ಸೆಸ್‌ ಡಯಾನಾ ಜೀವನ ಕುರಿತು ಹೇಳುತ್ತದೆ. ಅದೊಂದು ಐಷಾರಾಮಿ ಬ್ರಿಟೀಷ್‌ ರಾಜಮನೆತನ. ಡಯಾನಾ ತಮ್ಮ ರಾಜಮನೆತನದೊಂದಿಗೆ ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ ವಾಸವಾಗಿರುವ ದಿನಗಳು. 1991ರಲ್ಲಿ ಕ್ರಿಸ್‍ಮಸ್ ಸಮಯದಲ್ಲಿ ರಾಣಿಯ ಜೀವನದಲ್ಲಾದ ಮೂರು ಕರಾಳ ದಿನಗಳನ್ನು ‘ಸ್ಪೆನ್ಸರ್’ ಚಿತ್ರದಲ್ಲಿ ತೋರಿಸಲಾಗುತ್ತದೆ. ಪಬ್ಲೊ ಲಾರಿಯನ್ಸ್ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಣಿ ಡಯಾನಾರ ರಾಯಲ್ಟೀ ತೋರಿಸುವುದರ ಜೊತೆಗೆ ಅವರ ಜೀವನದ ಕರಾಳ ದಿನಗಳನ್ನೂ ತೋರಿಸಿದೆ. ಡಯಾನಾರ ಮದುವೆ ಸಂಬಂಧ ಮುರಿದುಬಿದ್ದು, ಇನ್ನು ತಾನು ರಾಣಿಯಾಗಿ ಮುಂದುವರೆಯಲು ನಿರಾಕರಿಸುತ್ತಾರೆ. ಹೀಗೆ ರಾಣಿ ಡಯಾನಾರ ಜೀವದಲ್ಲಿನ ಏಳು ಬೀಳುಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ‘ಸ್ಪೆನ್ಸರ್‌’ ಚಿತ್ರ ವೆನಿಸ್ ಫಿಲಂ ಫೆಸ್ಟಿವಲ್‍ನಲ್ಲಿ ಅನಾವರಣಗೊಂಡಿದ್ದು, ಇದು ಚಿತ್ರದ ಹೆಗ್ಗಳಿಕೆ ಎನ್ನುತ್ತದೆ ಚಿತ್ರತಂಡ. ಟೊರೆಂಟೋ ಹಾಗೂ ಇನ್ನು ಕೆಲ ಪ್ರಸಿದ್ಧ ಫಿಲಂ ಫೆಸ್ಟಿವಲ್‍ನಲ್ಲೂ ಸ್ಕ್ರೀನಿಂಗ್ ಆಗಿದೆ. ಚಿತ್ರ ಇದೇ ನವೆಂಬರ್ 5ರಂದು ಯುಎಸ್ ಮತ್ತು ಯು.ಕೆ ನಲ್ಲೂ ರಿಲೀಸ್‍ ಆಗಿದ್ದು ಜನಮನ್ನಣೆ ಪಡೆದಿದೆ. ಭಾರತದಲ್ಲಿ ನವೆಂಬರ್19ರಂದು ತೆರೆಗೆ ಬರುತ್ತಿದೆ.

Previous articleರಾಜ್ ತರುಣ್ ನಟನೆಯ ‘ಅನುಭವಿಂಚು ರಾಜಾ’; ಟ್ರೈಲರ್ ರಿಲೀಸ್ ಮಾಡಿ ಹಾರೈಸಿದ ನಟ ನಾಗಾರ್ಜುನ
Next articleವಿಶಿಷ್ಟ ಅನುಭವ ಕಟ್ಟಿಕೊಡುವ ಕ್ರೈಂ – ಡ್ರಾಮಾ; ಇದು ಅಂತಾರಾಷ್ಟ್ರೀಯ ಗುಣಮಟ್ಟದ ಕನ್ನಡ ಸಿನಿಮಾ

LEAVE A REPLY

Connect with

Please enter your comment!
Please enter your name here