ಜನಪ್ರಿಯ ಟೀವಿ ಸಿಟ್ಕಾಮ್‌ ‘ತಾರಕ್‌ ಮೆಹ್ತಾ ಕಾ ಊಲ್ಟಾ ಚಶ್ಮಾ’ ಆಧರಿಸಿದ ಅನಿಮೇಟೆಡ್‌ ಕಾಮಿಕ್‌ ಸರಣಿ ‘ತಾರಕ್‌ ಮೆಹ್ತಾ ಕಾ ಚೋಟಾ ಚಶ್ಮಾ’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘ತಾರಕ್‌ ಮೆಹ್ತಾ ಕಾ ಊಲ್ಟಾ ಚಶ್ಮಾ’ ಹಿಂದಿ ಕಿರುತೆರೆ ಸಿಟ್ಕಾಂ 2008ರಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ಹದಿನಾಲ್ಕು ವರ್ಷಗಳ ಕಾಲ 3300 ಸಂಚಿಕೆಗಳು ಮೂಡಿಬಂದಿದ್ದವು. ನಾಟಕಕಾರ, ಅಂಕಣಕಾರ ತಾರಕ್‌ ಮೆಹ್ತಾ ಅವರು ‘ಚಿತ್ರಲೇಖಾ’ ಗುಜರಾತಿ ಮ್ಯಾಗಜಿನ್‌ಗೆ ಬರೆದಿದ್ದ ‘ದುನಿಯಾ ನೆ ಉಂಧಾ ಚಶ್ಮಾ’ ಅಂಕಣ ಬರಹಗಳನ್ನು ಆಧರಿಸಿ ತಯಾರಾಗಿದ್ದ ಸರಣಿಯಿದು. ಕಿರುತೆರೆ ವೀಕ್ಷಕರು ಈ ಸರಣಿಯನ್ನು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಿದ್ದರು. ಈ ಸರಣಿ ಈಗ ಅನಿಮೇಟೆಡ್‌ ಪಾತ್ರಗಳೊಂದಿಗೆ ಫೆಬ್ರವರಿ 24ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಸರಣಿ ನಿರ್ಮಿಸಿದ ನೀಲಾ ಫಿಲ್ಮ್‌ ಪ್ರೊಡಕ್ಷನ್ಸ್‌ ನಿರ್ದೇಶಕ ಅಸಿತ್‌ ಕುಮಾರ್‌ ಮೋದಿ ಮಾತನಾಡಿ, “ಒಳ್ಳೆಯ ಕಂಟೆಂಟ್‌ಗೆ ಎಂದಿಗೂ ವೀಕ್ಷಕ ಬಳಗ ಸಿಗುತ್ತದೆ. ಸರಣಿಯ ಅನಿಮೇಟೆಡ್‌ ಸರಣಿಯನ್ನು ತರುತ್ತಿರುವುದು ನಮಗೆ ಖುಷಿ ತಂದಿದೆ. ಉತ್ತಮ ಹಾಸ್ಯ ಸಮಾಜದಲ್ಲಿ ಬದಲಾವಣೆ ತರುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿರುವ ನಮ್ಮ ಸರಣಿಯನ್ನು ವೀಕ್ಷಕರು, ವಿಶೇಷವಾಗಿ ಮಕ್ಕಳು ಮೆಚ್ಚಲಿದ್ದಾರೆ” ಎಂದಿದ್ಧಾರೆ.

LEAVE A REPLY

Connect with

Please enter your comment!
Please enter your name here