ಕಂಗನಾ ರನಾವತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ತೇಜಸ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವಾಯುಪಡೆ ಪೈಲಟ್‌ ಆಗಿ ಕಾರ್ಯನಿರ್ವಹಿಸಿದದ ತೇಜಸ್‌ ಗಿಲ್‌ ಅವರ ಬಯೋಪಿಕ್‌ ಚಿತ್ರವಿದು. ಸರ್ವೇಶ್‌ ಮೇವಾರಾ ನಿರ್ದೇಶನದ ಸಿನಿಮಾ ಅಕ್ಟೋಬರ್‌ 27ರಂದು ತೆರೆಕಾಣಲಿದೆ.

ಕಂಗನಾ ರನಾವತ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತೇಜಸ್’​ ಹಿಂದಿ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಕಂಗನಾ ಏರ್​ಫೋರ್ಸ್​ ಪೈಲಟ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸರ್ವೇಶ್ ಮೇವಾರಾ ನಿರ್ದೇಶಿಸಿದ್ದಾರೆ. ಸಿನಿಮಾವು ತೇಜಸ್ ಗಿಲ್ ಅವರ ಸ್ಪೂರ್ತಿದಾಯಕ ಬದುಕಿನ ಕಥೆಯನ್ನು ಹೊಂದಿದೆ. ಇವರು ವಾಯುಪಡೆಯ ಪೈಲಟ್ ಆಗಿದ್ದರು. ಕಂಗನಾ ಚಿತ್ರದಲ್ಲಿ ‘ತೇಜಸ್‌’ ಯುದ್ಧ ವಿಮಾನದ ಸಾಹಸ ಪ್ರಯಾಣದ ಭಾಗವಾಗಿದ್ದಾರೆ. ‘ತೇಜಸ್‌’ ಯುದ್ಧ ವಿಮಾನವು ಭಾರತದ ವಾಯುಪಡೆಯ ಪ್ರಮುಖ ಯುದ್ಧವಿಮಾನಗಳಲ್ಲೊಂದು. ಟೀಸರ್‌ನಲ್ಲಿ ಕಂಗನಾ ಫೈಲಟ್‌ ಆಗಿ, ಏರ್‌ ಪೋರ್ಸ್‌ ಫೈಲಟ್ ಯೂನಿಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೇಜಸ್‌ ಗಿಲ್‌ ಆಗಿ ದೇಶಪ್ರೇಮದ ಮಾತುಗಳನ್ನಾಡಿದ್ದು, ‘ಪ್ರತಿಯೊಂದು ಮಾತು ಪ್ರತಿ ಸಲ ಗೆಲ್ಲಲೇಬೇಕು ಎನ್ನುವ ಅವಶ್ಯಕತೆ ಇಲ್ಲ. ಯುದ್ಧಭೂಮಿಯಲ್ಲಿ ಈಗ ಯುದ್ಧ ನಡೆಯಬೇಕಾಗಿದೆ. ಈಗ ಆಕಾಶದಿಂದ ಮಳೆಯಲ್ಲಿ ಬೆಂಕಿಯ ಮಳೆ ಸುರಿಯುತ್ತದೆ. ಭಾರತದ ತಂಟೆಗೆ ಬಂದರೆ ಬಿಡುವ ಮಾತೇ ಇಲ್ಲ’ ಎಂದಿದ್ದಾರೆ.

ಅನ್ಶುಲ್ ಚೌಹಾಣ್, ವರುಣ್ ಮಿತ್ರ, ವೀಣಾ ನಾಯರ್, ಮಿರ್ಕೊ ಕ್ವೈನಿ, ರೋಹೆದ್ ಖಾನ್ ಮತ್ತು ಅನುಜ್ಖುರಾನಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾದ ಟ್ರೈಲರ್‌ ಭಾರತದ ನೌಕಾ ದಿನದಂದು ಬಿಡುಗಡೆಯಾಗಲಿದೆ. ಸಿನಿಮಾ ಇದೇ ಅಕ್ಟೋಬರ್‌ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಭಾರತದ ಸುಕೋಯ್‌ ಯುದ್ಧ ವಿಮಾನಗಳಲ್ಲಿ ‘ತೇಜಸ್‌’ ಸಾಕಷ್ಟು ಹಗುರವಾದ ವಿಮಾನ ನೌಕೆ. ಎಂಟರಿಂದ ಒಂಬತ್ತು ಟನ್‌ ತೂಕ ಕೊಂಡೊಯ್ಯವು ಸಾಮಥ್ಯ ಇದಕ್ಕಿದೆ. ಸುಖೋಯ್‌ನಂತೆಯೇ ಬೇಕಾದಷ್ಟು ಪೇಲೋಡ್‌ಗಳನ್ನು, ವೆಪನ್‌ಗಳನ್ನು ಇದು ಕೊಂಡೊಯ್ಯಬಲ್ಲದು ‘ತೇಜಸ್‌’ ಯುದ್ಧ ವಿಮಾನದ ಇನ್ನೊಂದು ಅನುಕೂಲ ಎಂದರೆ ಅದರ ವೇಗ. ಇದರ ವೇಗಕ್ಕೆ ಯಾವುದೇ ಸಾಟಿಯಿಲ್ಲ. ಈ ಯುದ್ಧ ವಿಮಾನವು ಶಬ್ದದ ವೇಗದಲ್ಲಿ ಸಾಗುತ್ತದೆ ಮತ್ತು ಭೂಮಿಯಿಂದ 52 ಸಾವಿರ ಅಡಿ ಎತ್ತರದವರೆಗೂ ನಿರಾಂತಕವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿದೆ.

LEAVE A REPLY

Connect with

Please enter your comment!
Please enter your name here