ರಾಮ್‌ ಸಂಗಯ್ಯ ನಿರ್ದೇಶನದ ‘ತಂಡಟ್ಟಿ’ ತಮಿಳು ಕಾಮಿಡಿ ಸಿನಿಮಾ ಜುಲೈ 14ರಿಂದ Amazon Primeನಲ್ಲಿ ಸ್ಟ್ರೀಮ್‌ ಆಗಲಿದೆ. ಪಶುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಕನ್ನಡ ಭಾಷೆಯಲ್ಲೂ Primeನಲ್ಲಿ ಸಿಗಲಿದೆ.

ಪಶುಪತಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ತಂಡಟ್ಟಿ’ ತಮಿಳು ಕಾಮಿಡಿ ಥ್ರಿಲ್ಲರ್‌ ಸಿನಿಮಾ ಜುಲೈ 14ರಿಂದ Prime Videoದಲ್ಲಿ ಸ್ಟ್ರೀಮ್‌ ಆಗಲಿದೆ. ರಾಮ್ ಸಂಗಯ್ಯ ಚೊಚ್ಚಲ ನಿರ್ದೇಶನದ ಚಿತ್ರವಿದು. ‘ಸರ್ದಾರ್’ ಮತ್ತು ‘ರನ್ ಬೇಬಿ ರನ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಪ್ರಿನ್ಸ್ ಪಿಕ್ಚರ್ಸ್ ಈ ಚಿತ್ರ ನಿರ್ಮಿಸಿದೆ. ರೋಹಿಣಿ ಮೊಲ್ಲೆಟಿ, ವಿವೇಕ್ ಪ್ರಸನ್ನ, ಅಮ್ಮು ಅಭಿರಾಮಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ಸ್ಯಾಮ್‌ ಸಿ ಎಸ್ ಹಿನ್ನೆಲೆ ಸಂಗೀತವಿರುವ ಚಿತ್ರಕ್ಕೆ ಮಹೇಶ್ ಮುತ್ತುಸ್ವಾಮಿ ಛಾಯಾಗ್ರಹಣವಿದೆ. ಜೂನ್ 23ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟ ಧನುಷ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಚಿತ್ರದ ಪೋಸ್ಟರ್‌ ಹಂಚಿಕೊಂಡು ಸ್ಟ್ರೀಮಿಂಗ್‌ ಡೇಟ್‌ನ ಮಾಹಿತಿ ನೀಡಿದ್ದಾರೆ. ಈ ಸಿನಿಮಾ ಮೂಲ ತಮಿಳು ಸೇರಿದಂತೆ ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here