ಪುಷ್ಪೇಂದ್ರನಾಥ್ ಮಿಶ್ರ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಚೂನಾ’ ವೆಬ್ ಸರಣಿ Netflixನಲ್ಲಿ ಆಗಸ್ಟ್ 30ರಿಂದ ಸ್ಟ್ರೀಮ್ ಆಗಲಿದೆ. ಬಾಲಿವುಡ್ ನಟ ಜಿಮ್ಮಿ ಶೆರ್ಗಿಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ Heist Comedy ಸರಣಿಯಿದು.
ಜಿಮ್ಮಿ ಶೆರ್ಗಿಲ್ ಅಭಿನಯದ heist comedy ಹಿಂದಿ ಸರಣಿ ‘ಚೂನಾ’ ಆಗಸ್ಟ್ 3ರಿಂದ Netflixರಿಂದ ಸ್ಟ್ರೀಮ್ ಆಗಲಿದೆ. ನಟ ತಮ್ಮ Instagram ಖಾತೆಯಲ್ಲಿ ಮಾಹಿತಿಯ ವೀಡಿಯೊ ಹಂಚಿಕೊಂಡಿದ್ದಾರೆ. ಸರಣಿ ಕುರಿತು ತಮ್ಮ ಉತ್ಸಾಹ ಹಂಚಿಕೊಂಡ ಜಿಮ್ಮಿ, ‘ಈ ಸರಣಿಯು ನೆಟ್‌ಫ್ಲಿಕ್ಸ್‌ನ ನನ್ನ ಮೊದಲ ಸಹಯೋಗವಾಗಿದೆ. ‘ಚೂನಾ’ಗಾಗಿ ನಾನು ಎದುರು ನೋಡುತ್ತಿದ್ದೇನೆ. ಒಬ್ಬ ನಟನಾಗಿ ನನ್ನ ನಟನೆಯ ಸಾಮರ್ಥ್ಯವನ್ನು ಪ್ರತಿಬಾರಿ ಕಂಡುಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತೇನೆ’ ಎಂದಿದ್ದಾರೆ. ಸರಣಿಯನ್ನು ಫ್ಲೈಯಿಂಗ್ ಸಾಸರ್ ಪ್ರೊಡಕ್ಷನ್ ಫಿಲ್ಮ್ಸ್ ನಿರ್ಮಿಸಿದ್ದು, ಪುಷ್ಪೇಂದ್ರ ನಾಥ್ ಮಿಶ್ರಾ ಬರೆದು ನಿರ್ದೇಶಿಸಿದ್ದಾರೆ. ಆಶಿಮ್ ಗುಲಾಟಿ, ವಿಕ್ರಮ್ ಕೊಚ್ಚರ್, ಚಂದನ್ ರಾಯ್, ನಮಿತ್ ದಾಸ್, ಜ್ಞಾನೇಂದ್ರ ತ್ರಿಪಾಠಿ, ಅತುಲ್ ಶ್ರೀವಾಸ್ತವ, ಮೋನಿಕಾ ಪನ್ವಾರ್, ಚಂದನ್ ರಾಯ್ ಮತ್ತು ನಿಹಾರಿಕಾ ಲೈರಾ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Yaha kaam aur kaand, dono muhurat dekh kar hote hai.#Choona releasing on 3rd August, only on Netflix! 🔪#ChoonaOnNetflix pic.twitter.com/Fu3VVmqMPP
— Netflix India (@NetflixIndia) July 11, 2023