ವಿಕ್ರಮ್‌ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ ‘ತಂಗಲಾನ್‌’ ಟೀಸರ್‌ ಬಿಡುಗಡೆಯಾಗಿದೆ. ಪ ರಂಜಿತ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಳವಿಕಾ ಮೋಹನನ್‌ ನಟಿಸಿದ್ದಾರೆ. ಜನವರಿ 26, 2024ರಂದು ಸಿನಿಮಾ ತೆರೆಕಾಣಲಿದೆ.

ಚಿಯಾನ್‌ ವಿಕ್ರಮ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ‘ತಂಗಲಾನ್‌’ ತಮಿಳು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಲನಚಿತ್ರವನ್ನು ಪ ರಂಜಿತ್‌ ನಿರ್ದೇಶಿಸಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಕುರಿತಾದ ಸೂಕ್ಷ್ಮ ದೃಷ್ಟಿಕೋನಗಳನ್ನು ಟೀಸರ್‌ ಒಳಗೊಂಡಿದೆ. ಬುಡಕಟ್ಟು ಸಮುದಾಯವೊಂದರ ಮೇಲೆ ನಡೆಯುವ ದಬ್ಬಾಳಿಕೆಯ ವಿರುದ್ಧ ದಂಗೆ ಎದ್ದು, ತುಳಿತಕ್ಕೊಳಗಾದ ಗುಂಪಿನ ಚಿತ್ರಣವಿದೆ. ಮಾಳವಿಕಾ ಮೋಹನನ್‌ ಆ ಬುಡಕಟ್ಟು ಗುಂಪಿನ ಪ್ರಮುಖಳಾಗಿ ಕಾಣಿಸಿಕೊಂಡಿದ್ದು, ಬ್ರಿಟಿಷರ ವಿರುದ್ಧ ನಡೆಯುವ ಘರ್ಷಣಾ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಲನಚಿತ್ರವನ್ನು Studio Green ಮತ್ತು Neelam Productions ಬ್ಯಾನರ್‌ ಅಡಿಯಲ್ಲಿ ಕೆ ಇ ಜ್ಞಾನವೇಲರಾಜ ನಿರ್ಮಿಸಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದು, ತಮಿಳು ಪ್ರಭಾ ಬರವಣಿಗೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅಳಗಿಯ ಪೆರಿಯವನ್ ಸಂಭಾಷಣೆ, ಎ ಕಿಶೋರ್ ಕುಮಾರ್ ಛಾಯಾಗ್ರಹಣ, ಸೆಲ್ವ ಆರ್ ಕೆ ಸಂಕಲನ ಚಿತ್ರಕ್ಕಿದೆ. ಜನವರಿ 26, 2024ರಂದು ಮೂಲ ತಮಿಳು ಸೇರಿದಂತೆ, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here