ರಿಚಾ ಛಡ್ಡಾ, ಪ್ರತೀಕ್‌ ಗಾಂಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ಗ್ರೇಟ್‌ ಇಂಡಿಯನ್‌ ಮರ್ಡರ್‌’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ವಿಕಾಸ್‌ ಸ್ವರೂಪ್‌ ರಚನೆಯ ‘ಸಿಕ್ಸ್‌ ಸಸ್ಪೆಕ್ಟ್ಸ್‌’ ಕೃತಿಯನ್ನು ಆಧರಿಸಿ ತಿಗ್ಮಾನ್ಶು ಧುಲಿಯಾ ನಿರ್ದೇಶಿಸಿರುವ ಸರಣಿ ಫೆ.4ರಿಂದ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ ಸರಣಿ ‘ದಿ ಗ್ರೇಟ್‌ ಇಂಡಿಯನ್‌ ಮರ್ಡರ್‌’ ಮೊದಲ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ರೋಚಕ ಮರ್ಡರ್‌ ಮಿಸ್ಟರಿ ಎನ್ನುವ ಸುಳಿವು ಸಿಗುತ್ತದೆ. ಬಾಲಿವುಡ್‌ ನಟಿ ರಿಚಾ ಛಡ್ಡಾ ಇನ್ವೆಸ್ಟಿಗೇಷನ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗಿಲ್ಲಿ ಪ್ರಭಾವಿ ರಾಜಕಾರಣಿ (ಅಶುತೋಷ್‌ ರಾಣಾ) ಪುತ್ರ ವಿಕ್ಕಿ ರಾಯ್‌ ಕೊಲೆಯ ಸುಳಿವನ್ನು ಪತ್ತೆ ಹಚ್ಚುವ ಟಾಸ್ಕ್‌ ಇದೆ. ಮೃತ ವ್ಯಕ್ತಿ ದುಷ್ಟ ಎಂದಷ್ಟೇ ತಿಳಿಯುತ್ತದಾದರೂ ಕತೆಯ ಎಳೆಯನ್ನು ಬಿಟ್ಟುಕೊಡದಿರುವುದು ಟ್ರೈಲರ್‌ನ ಹೆಗ್ಗಳಿಕೆ. DCP ಸುಧಾ ಭಾರದ್ವಾಜ್‌ ಪಾತ್ರದಲ್ಲಿ ನಟಿಸಿರುವ ರಿಚಾ, “ಥ್ರಿಲ್ಲರ್‌, ನನಗೆ ಎಂದಿಗೂ ಪ್ರಿಯವಾಗುವ ಜಾನರ್‌. ಕಲಾವಿದರಿಗೆ ಸವಾಲೊಡ್ಡುವ ಮತ್ತು ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಸಿಕೊಳ್ಳಬಹುದಾದ ಜಾನರ್‌ ಇದು. ತಿಗ್ಮಾನ್ಶು ಧುಲಿಯಾ ಕತೆಯನ್ನು ಸಮರ್ಥವಾಗಿ ನಿರೂಪಿಸುವ ಪ್ರತಿಭಾವಂತ ನಿರ್ದೇಶಕ” ಎನ್ನುತ್ತಾರೆ.

CBI ಆಫೀಸರ್‌ ಸೂರಜ್‌ ಯಾದವ್‌ ಪಾತ್ರ ನಿರ್ವಹಿಸಿರುವ ಪ್ರತೀಕ್‌ ಗಾಂಧಿ, “ನಟನಾಗಿ ಇದು ನನಗೆ ಹೊಸ ಸವಾಲು. ಕಾನೂನನ್ನು ಪ್ರತಿನಿಧಿಸುವ ಸಂದರ್ಭ ಬಂದಾಗ ಕಾನೂನನ್ನು ಮುರಿಯಲು ಹಿಂಜರಿಯದ ವ್ಯಕ್ತಿಯಾಗಿ ನನ್ನ ಪಾತ್ರವಿದೆ” ಎನ್ನುತ್ತಾರೆ. ವಿಕಾಸ್‌ ಸ್ವರೂಪ್‌ ರಚನೆಯ ‘ಸಿಕ್ಸ್‌ ಸಸ್ಪೆಕ್ಟ್ಸ್‌’ ಕೃತಿಯನ್ನು ಆಧರಿಸಿ ತಯಾರಾಗಿರುವ ಈ ಸರಣಿಯನ್ನು ನಟ ಅಜಯ್‌ ದೇವಗನ್‌ ಮತ್ತು ರೀಲ್‌ ಲೈಫ್‌ ಎಂಟರ್‌ಟೇನ್‌ಮೆಂಟ್‌ ಜೊತೆಗೂಡಿ ನಿರ್ಮಿಸಿದ್ದಾರೆ. ರಘುವೀರ್‌ ಯಾದವ್‌, ಶಶಾಂಕ್‌ ಅರೋರಾ, ಶರೀಬ್ ಹಶ್ಮಿ, ಅಶುತೋಷ್‌ ರಾಣಾ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 4ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here