ಭಾರತ ಕಂಡ ದೊಡ್ಡ ಕ್ರಿಮಿನಲ್ ವೀರಪ್ಪನ್ ಕುರಿತು ‘The Hunt for Veerappan’ docu-series ಟೀಸರ್ ಬಿಡುಗಡೆಯಾಗಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಸರಣಿ ಆಗಸ್ಟ್ 4ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ.
Netflix docu-series ‘The Hunt for Veerappan’ ಟೀಸರ್ ಬಿಡುಗಡೆಯಾಗಿದೆ. ನಾಲ್ಕು ಭಾಗಗಳ ಸರಣಿ ‘ಭಾರತದ ರಾಬಿನ್ ಹುಡ್’ ವೀರಪ್ಪನ್ ರಕ್ತಚರಿತ್ರೆ ಹೇಳಲಿದೆ. ಭಾರತ ಕಂಡ ದೊಡ್ಡ ಕ್ರಿಮಿನಲ್ ವೀರಪ್ಪನ್ ದಕ್ಷಿಣ ಭಾರತದ ಕಾಡುಗಳಲ್ಲಿ ತನ್ನ ಕಾರ್ಯಾಚರಣೆ ನಡೆಸುತ್ತಿದ್ದವನು. ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ದುಃಸ್ವಪ್ನವಾಗಿದ್ದ ವೀರಪ್ಪನ್ ಕುರಿತು ನಾಲ್ಕು ಭಾಗಗಳ ಸರಣಿಯನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದು, ಅಪೂರ್ವ ಭಕ್ಷಿ ನಿರ್ಮಿಸಿದ್ದಾರೆ. ಟೀಸರ್‌ನಲ್ಲಿ ವೀರಪ್ಪನ್ ಪರಿಚಯಿಸುವ ಕಿರುಟಿಪ್ಪಣಿಯಿದೆ. ವಿಶಿಷ್ಟ ಹಾಡೊಂದರ ಹಿನ್ನೆಲೆಯಲ್ಲಿ ಅವನ ಗ್ಯಾಂಗ್ 119 ಜನರನ್ನು ಕೊಂದದ್ದು, ಅವನಿಗಾಗಿ ನಡೆದ ದುಬಾರಿ ಹುಡುಕಾಟದ ಬಗ್ಗೆ ಹೇಳಲಾಗಿದೆ. ಹಿಂದೆ ಕೇಂದ್ರದಲ್ಲಿ ಗೃಹಮಂತ್ರಿಯಾಗಿದ್ದ ಎಲ್ ಕೆ ಅಡ್ವಾನಿ ಮಾತುಗಳೂ ಇದ್ದು, ಈ ಡಾಕ್ಯೂ ಸರಣಿ ವೀರಪ್ಪನ್ ಕುರಿತು ಸಮಗ್ರ ಚಿತ್ರಣ ನೀಡುವ ಸೂಚನೆ ನೀಡುತ್ತದೆ. ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಸರಣಿಯನ್ನು ಚಿತ್ರಿಸಲಾಗಿದೆ. ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಅವತರಣಿಕೆಗಳೂ ಇರಲಿವೆ. ಆಗಸ್ಟ್ 4ರಿಂದ ಸರಣಿ ಸ್ಟ್ರೀಮ್ ಆಗಲಿದೆ.