ಅಹ್ಮದ್‌ ಖಾನ್‌ ನಿರ್ದೇಶನದ ‘ವೆಲ್‌ಕಮ್‌ ಟು ದಿ ಜಂಗಲ್‌’ ಹಿಂದಿ ಚಿತ್ರದಲ್ಲಿ ಬಾಲಿವುಡ್‌ನ 20ಕ್ಕೂ ಹೆಚ್ಚು ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ತಮಾಷೆ ವೀಡಿಯೋವೊಂದರ ಮೂಲಕ ನಿರ್ಮಾಪಕರು ಚಿತ್ರವನ್ನು ಘೋಷಿಸಿದ್ದಾರೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಸಿನಿಮಾ ತೆರೆಕಾಣಲಿದೆ.

ಅಕ್ಷಯ್‌ ಕುಮಾರ್‌ ಸೇರಿದಂತೆ 24 ಜನಪ್ರಿಯ ಕಲಾವಿದರು ನಟಿಸಲಿರುವ ‘ವೆಲ್‌ಕಮ್‌ ಟು ದಿ ಜಂಗಲ್‌’ (Welcome – 3) ಹಿಂದಿ ಸಿನಿಮಾ ಘೋಷಣೆಯಾಗಿದೆ. ಚಿತ್ರತಂಡವು ದೊಡ್ಡ ನಟರ ಗುಂಪೊಂದು ಸೇನೆಯ ಸಮವಸ್ತ್ರದಲ್ಲಿ ಹಾಡು ಹಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ಹಾಸ್ಯ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ಪರೇಶ್ ರಾವಲ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಕೃಷ್ಣಾ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಮಿಕಾ ಸಿಂಗ್, ರಾಹುಲ್ ದೇವ್, ಮುಖೇಶ್ ತಿವಾರಿ, ಶರೀಬ್ ಹಶ್ಮಿ, ಇನಾಮುಲ್ಹಾಕ್, ಜಾಕಿರ್ ಹುಸೇನ್ ಮತ್ತು ಯಶಪಾಲ್ ಶರ್ಮಾ ಹಾಗೂ ನಟಿಯರಾದ ರವೀನಾ ಟಂಡನ್, ಲಾರಾ ದತ್ತಾ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ದಿಶಾ ಪಟಾನಿ ಸೇರಿದಂತೆ ಬಾಲಿವುಡ್‌ನ ದೊಡ್ಡ ತಾರಾಬಗಳವೇ ಇಲ್ಲಿದೆ.

ಚಿತ್ರದ ಅನೌನ್ಸ್‌ಮೆಂಟ್‌ ವೀಡಿಯೋದಲ್ಲಿ ನಟರೆಲ್ಲರೂ ವೆಲ್ಕಮ್ ಥೀಮ್‌ನ ಟ್ಯೂನ್‌ಗೆ ಕ್ಯಾಪೆಲ್ಲಾವನ್ನು ಪ್ರದರ್ಶಿಸುತ್ತಿದ್ದಾರೆ. ಜೊತೆಗೆ ಅವರೆಲ್ಲರೂ ಸೇನಾ ಸಮವಸ್ತ್ರ ಧರಿಸಿ ಚೇಷ್ಟೆಗಳನ್ನು ಮಾಡುತ್ತಿರುವ ವೀಡಿಯೋ ಇದು! Jio Studios ಸಿನಿಮಾ ಅರ್ಪಿಸುತ್ತಿದ್ದು Base Industries Group co ಬ್ಯಾನರ್‌ ಅಡಿಯಲ್ಲಿ ಫಿರೋಜ್ ಎ ನಾಡಿಯಾಡ್‌ವಾಲಾ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸುತ್ತಿದ್ದಾರೆ. ಫರ್ಹಾದ್‌ ಸಾಮ್ಜಿ ಚಿತ್ರಕಥೆ ಬರೆದಿದ್ದು, Meet Bros ಸಂಗೀತ ಸಂಯೋಜಿಸುತ್ತಿದ್ದಾರೆ. ಮುಂದಿನ ವರ್ಷ ಡಿಸೆಂಬರ್ 20, 2024 ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ‘Welcome’ ಚಿತ್ರದ ಮೊದಲ ಎರಡು ಕಂತುಗಳಲ್ಲಿ ಕತ್ರೀನಾ ಕೈಫ್‌, ಫಿರೋಜ್‌ ಖಾನ್‌, ಅನಿಲ್ ಕಪೂರ್ ಮತ್ತು ನಾನಾ ಪಾಟೇಕರ್ ಕಾಣಿಸಿಕೊಂಡಿದ್ದರು. ಈ ಚಿತ್ರಗಳನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದರು.

LEAVE A REPLY

Connect with

Please enter your comment!
Please enter your name here