ವಂಶಿ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಟೈಗರ್‌ ನಾಗೇಶ್ವರ ರಾವ್‌’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರವಿ ತೇಜ ಹೀರೋ ಆಗಿ ನಟಿಸಿರುವ ಸಿನಿಮಾದ ಇಬ್ಬರು ನಾಯಕಿಯರಾಗಿ ನೂಪುರ್‌ ಸನೊನ್‌ ಮತ್ತು ಗಾಯತ್ರಿ ಭಾರದ್ವಾಜ್‌ ಇದ್ದಾರೆ. ಅಕ್ಟೋಬರ್‌ 20ರಂದು ಸಿನಿಮಾ ತೆರೆಕಾಣಲಿದೆ.

ರವಿ ತೇಜ ನಟನೆಯ ‘ಟೈಗರ್ ನಾಗೇಶ್ವರ ರಾವ್’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾಗೆ ವಂಶಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಅಭಿಷೇಕ್ ಅಗರ್‌ವಾಲ್‌ ಆರ್ಟ್ಸ್ ಬ್ಯಾನರ್‌ ಅಡಿ ಇವರೇ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಟೈಗರ್ ನಾಗೇಶ್ವರ ರಾವ್‌ನನ್ನು ಹಿಡಿಯಲು ಮುರುಳಿ ಶರ್ಮಾ ಅವರ ಪೊಲೀಸ್‌ ಪಡೆಯ ಹುಡುಕಾಟದ ಒಂದು ಭಾಗವಾಗಿ ಅನುಪಮ್ ಖೇರ್ ಉನ್ನತ ಶ್ರೇಣಿಯ IB ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಟೀಸರ್ ‘ಟೈಗರ್ ನಾಗೇಶ್ವರ ರಾವ್’ ಪಾತ್ರದ ವಿವರಣೆ ನೀಡಿದೆ. ಅವನು ಮದ್ರಾಸ್ ಸೆಂಟ್ರಲ್ ಜೈಲಿನಿಂದ ಹೇಗೆ ತಪ್ಪಿಸಿಕೊಂಡ ಎಂಬ ಚಿತ್ರಣವನ್ನು ತೋರಿಸಿದೆ.

‘ಭಾರತದ ಅತಿದೊಡ್ಡ ಕಳ್ಳ’ ಎಂಬ ಅಡಿಬರಹ ಹೊಂದಿರುವ ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗಲಿದ್ದು, ಸ್ಟುವರ್ಟ್‌ಪುರಂನ ಮಾಸ್ಟರ್ ಮೈಂಡ್ ಕ್ರಿಮಿನಲ್, ಕುಖ್ಯಾತ ಕಳ್ಳನ ಜೀವನದ ನೈಜ ಘಟನೆಗಳ ಕತೆ. ಮಾಸ್ ಮಹಾರಾಜ ರವಿ ತೇಜ ಅವರ ಮೊದಲ ಪಾನ್ ಇಂಡಿಯಾ ಚಿತ್ರವಿದು. ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಸಂಭಾಷಣೆ, ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ, ಆರ್ ಮಾಧಿ ಐ ಎಸ್‌ ಸಿ ಛಾಯಾಗ್ರಹಣವಿದೆ. ನೂಪುರ್‌ ಸನೊನ್‌, ಗಾಯತ್ರಿ ಭಾರದ್ವಾಜ್‌, ಜಾನ್‌ ಅಬ್ರಹಾಂ ಮತ್ತು ವಿಶೇಷ ಪಾತ್ರದಲ್ಲಿ ಕಾರ್ತಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಅಕ್ಟೋಬರ್‌ 20ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous article‘ಲಿಯೋ’ ಚಿತ್ರದಲ್ಲಿ ‘ಹೆರಾಲ್ಡ್ ದಾಸ್’ ಆಗಿ ಅರ್ಜುನ್‌ ಸರ್ಜಾ | ವಿಜಯ್‌ ತಮಿಳು ಸಿನಿಮಾ
Next articleಈ ವಾರ (ಆಗಸ್ಟ್‌ 18) ಬಿಡುಗಡೆ | Baang, ಕ್ಷೇತ್ರಪತಿ, ಘೂಮರ್‌, ಮಿಸ್ಟರ್‌ ಪ್ರಗ್ನೆಂಟ್‌

LEAVE A REPLY

Connect with

Please enter your comment!
Please enter your name here