ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಲಿಯೋ’ ತಮಿಳು ಚಿತ್ರದಲ್ಲಿನ ಅರ್ಜುನ್‌ ಸರ್ಜಾ ಪಾತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸರ್ಜಾ ಅವರು ಹೆಜಾಲ್ಡ್‌ ದಾಸ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ವಿಜಯ್‌ ಹೀರೋ ಆಗಿ ನಟಿಸುತ್ತಿರುವ ಸಿನಿಮಾ ಅಕ್ಟೋಬರ್‌ 19ರಂದು ತೆರೆಕಾಣಲಿದೆ.

ವಿಜಯ್‌ ಹೀರೋ ಆಗಿ ನಟಿಸುತ್ತಿರುವ ‘ಲಿಯೋ’ ಚಿತ್ರದಲ್ಲಿನ ಅರ್ಜುನ್‌ ಸರ್ಜಾ ಅವರ ಫಸ್ಟ್‌ ಲುಕ್‌ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರ್ಜುನ್‌ ‘ಹೆರಾಲ್ಡ್ ದಾಸ್’ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಸರ್ಜಾ ಫಸ್ಟ್ ಲುಕ್ ಮೋಷನ್‌ ವೀಡಿಯೊ ಹಂಚಿಕೊಂಡಿದ್ದಾರೆ. ‘ಗ್ಲಿಂಪ್ಸ್ ಆಫ್ ಹೆರಾಲ್ಡ್ ದಾಸ್’ ಶೀರ್ಷಿಕೆಯ ಈ ವಿಡಿಯೋ ಅರ್ಜುನ್ ಖಳಛಾಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುಳಿವು ನೀಡುತ್ತದೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಗೌತಮ್ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಮ್ಯಾಥ್ಯೂ ಥಾಮಸ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಅಭಿರಾಮಿ ವೆಂಕಟಾಚಲಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್‌ ಸಂಗೀತ, ಮನೋಜ್ ಪರಮಹಂಸ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನವಿದೆ. 7 Screen Studio ಮತ್ತು The Route ಜಂಟಿಯಾಗಿ ಸಿನಿಮಾ ನಿರ್ಮಿಸಿವೆ. ಅಕ್ಟೋಬರ್ 19ರಂದು ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous articleಧನ್ವೀರ್‌ – ರೀಷ್ಮಾ ‘ವಾಮನ’ ಆಕ್ಷನ್‌ ಟೀಸರ್‌ | ಮೈಸೂರಿನಲ್ಲಿ ನಡೆದ ಕಾರ್ಯಕ್ರಮ
Next article‘ಟೈಗರ್‌ ನಾಗೇಶ್ವರ ರಾವ್‌’ ಟೀಸರ್‌ | ರವಿ ತೇಜ ನಟನೆಯ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here