ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಅಖಂಡ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೀರೋ ಬಾಲಯ್ಯ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್‌ನಲ್ಲಿ ಭರ್ಜರಿ ಆಕ್ಷನ್ ಸೀನ್‌ಗಳು ಮತ್ತು ಡೈಲಾಗ್‌ಗಳಿವೆ. ಡಿಸೆಂಬರ್‌ 2ರಂದು ಸಿನಿಮಾ ತೆರೆಕಾಣಲಿದೆ.

ಬೊಯಪಾಟಿ ಶ್ರೀನು ನಿರ್ದೇಶನದಲ್ಲಿ ಬಾಲಕೃಷ್ಣ ನಟಿಸಿರುವ ‘ಅಖಂಡ’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ‘ಸಿಂಹ’ ಮತ್ತು ‘ಲೆಜೆಂಡ್‌’ ಸಿನಿಮಾಗಳ ನಂತರ ಬೊಯಪಾಟಿ ಶ್ರೀನು ಮತ್ತು ಬಾಲಯ್ಯ ಜೋಡಿಯ ಮೂರನೇ ಸಿನಿಮಾ ಇದು. ಟ್ರೈಲರ್‌ ವೀಕ್ಷಿಸಿದರೆ ಬಾಲಯ್ಯಗೆ ಚಿತ್ರದಲ್ಲಿ ಎರಡು ಭಿನ್ನ ಶೇಡ್‌ಗಳಿರುವುದು ತಿಳಿದುಬರುತ್ತದೆ. ಟ್ರೈಲರ್‌ನ ಮೊದಲರ್ಧದಲ್ಲಿ ಆಂಗ್ರಿ ಯಂಗ್‌ಮ್ಯಾನ್‌ ಆಗಿ ಕಾಣಿಸುವ ಬಾಲಕೃಷ್ಣ ದ್ವಿತಿಯಾರ್ಧದಲ್ಲಿ ಗಾಡ್‌ಮ್ಯಾನ್‌ (ಮೆಸ್ಸಯ್ಯ) ಆಗಿದ್ದಾರೆ. ಎಂದಿನ ಬಾಲಕೃಷ್ಣ ಅವರ ಚಿತ್ರಗಳಂತೆ ಇಲ್ಲಿಯೂ ಭರ್ಜರಿ ಡೈಲಾಗ್‌ಗಳು ಮತ್ತು ಲಾರ್ಜರ್‌ದ್ಯಾನ್ ಲೈಫ್‌ ಆಕ್ಷನ್‌ ಸೀನ್‌ಗಳಿವೆ. ಇವು ಖಂಡಿತವಾಗಿ ಬಾಲಯ್ಯ ಅಭಿಮಾನಿಗಳಿಗೆ ಇಷ್ಟವಾಗಲಿವೆ. ಟ್ರೈಲರ್ ತುಂಬಾ ಬಾಲಕೃಷ್ಣ ಅವರೇ ತುಂಬಿಕೊಂಡಿದ್ದು, ಶ್ರೀಕಾಂತ್‌ ಮತ್ತು ಜಗಪತಿ ಬಾಬು ಅರೆಕ್ಷಣ ಬಂದುಹೋಗುತ್ತಾರೆ. ಚಿತ್ರದ ಪ್ರಮುಖ ಖಳನಟನಾಗಿ ಶ್ರೀಕಾಂತ್ ಅಭಿನಯಿಸಿದ್ದು, ಅವರ ಪಾತ್ರದ ಬಗ್ಗೆ ಹೆಚ್ಚೇನೂ ಗೊತ್ತಾವುದಿಲ್ಲ.

ದ್ವಾರಕಾ ಕ್ರಿಯೇಷನ್ಸ್‌ನಡಿ ಮಿರ್ಯಾಲಾ ರವೀಂದ್ರ ರೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ಡಿಸೆಂಬರ್‌ 2ರಂದು ಸಿನಿಮಾ ತೆರೆಕಾಣಲಿದೆ. ಇನ್ನು ಬಾಲಕೃಷ್ಣ ಮುಂದಿನ ಸಿನಿಮಾ ಗೋಪಿಚಂದ್‌ ಮಾಲಿನೇನಿ ನಿರ್ದೇಶನದಲ್ಲಿ ತಯಾರಾಗಲಿದ್ದು, ಪ್ರೀಪ್ರೊಡಕ್ಷನ್ ಕೆಲಸಗಳು ನಡೆದಿವೆ. ಬಾಲಕೃಷ್ಣ ಅವರೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜನಪ್ರಿಯ ತೆಲುಗು ಓಟಿಟಿ ‘ಆಹಾ’ದಲ್ಲಿ ಬಾಲಕೃಷ್ಣ ನಿರೂಪಣೆಯಲ್ಲಿ ‘ಅನ್‌ಸ್ಟಾಪಬಲ್‌’ ಶೋ ಸ್ಟ್ರೀಮ್ ಆಗುತ್ತಿದೆ. ಶೋನಲ್ಲಿ ಬಾಲಕೃಷ್ಣ ಅವರು ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳೊಂದಿಗೆ ಮಾತನಾಡಲಿದ್ದಾರೆ. ಇತ್ತೀಚೆಗೆ ‘ಅನ್‌ಸ್ಟಾಪಬಲ್‌’ ಶೋನಲ್ಲಿ ಮಂಚು ಮೋಹನ್ ಬಾಬು ಕುಟುಂಬದೊಂದಿಗಿನ ಬಾಲಕೃಷ್ಣರ ಮಾತುಕತೆ ಸ್ಟ್ರೀಮ್ ಆಯ್ತು. ಮುಂದಿನ ಶೋನಲ್ಲಿ ಅವರು ಯುವನಟ ನಾನಿ ಜೊತೆ ಮಾತನಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here