ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘RRR ಚಿತ್ರದ ‘ನಾಟು ನಾಟು’ ಲಿರಿಕಲ್‌ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಟಾಲಿವುಡ್‌ನ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್ ಹಾಡಿನಲ್ಲಿ ಕುಣಿದು ಸಂಭ್ರಮಿಸಿದ್ದಾರೆ.

ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ಟೀಸರ್, ಪೋಸ್ಟರ್‌ಗಳು ನಿರೀಕ್ಷೆ ಹೆಚ್ಚಿಸಿವೆ. ಇದೀಗ ‘ಮಾಸ್ ಅಂಥೆಮ್‌’ ಎಂದು ಚಿತ್ರದ ‘ನಾಟು ನಾಟು’ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿನಲ್ಲಿ ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್‌ ಹೀರೋಗಳಾದ ರಾಮ್‌ ಚರಣ್‌ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್ ಭರ್ಜರಿ ಸ್ಟೆಪ್‌ ಹಾಕಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಇಬ್ಬರೂ ಉತ್ತಮ ಡ್ಯಾನ್ಸರ್‌ಗಳು. ಹಾಗಾಗಿ ಇವರ ಸ್ಟೆಪ್‌ಗಳು ನೋಡುಗರಿಗೆ ಖುಷಿ ಕೊಡುತ್ತವೆ. ಇಬ್ಬರೂ ಎನರ್ಜಿಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ನಿಸ್ಸಂಶಯವಾಗಿ ಈ ಟ್ರ್ಯಾಕ್‌ ಬಹುಕಾಲ ಉಳಿಯಲಿದೆ. ಚಂದ್ರಬೋಸ್‌ ರಚಿಸಿರುವ ಈ ಹಾಡಿಗೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ರಾಹುಲ್‌ ಸಿಪ್ಲಿಗುಂಜ್‌ ಮತ್ತು ಕಾಲ ಭೈರವ ಹಾಡಿದ್ದಾರೆ.

ಮುನ್ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ತಾರೆಯರಾದ ಅಜಯ್ ದೇವಗನ್‌, ಅಲಿಯಾ ಭಟ್, ಬ್ರಿಟಿಷ್‌ ನಟಿ ಒಲಿವಿಯಾ ಮೊರಿಸ್, ಹಾಲಿವುಡ್ ನಟ ರೇ ಸ್ಟೀವನ್‌ಸನ್‌, ಐರಿಷ್ ನಟ ಅಲಿಸನ್ ಡೂಡಿ ನಟಿಸಿದ್ದಾರೆ. ತೆಲುಗು ಬುಡಕಟ್ಟು ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮಾರಂ ಭೀಮ್‌ ಅವರ ಕತೆಗಳಿಗೆ ಕಲ್ಪನೆ ಬೆರೆಸಿ ಮಾಡುತ್ತಿರುವ ಸಿನಿಮಾ ‘RRR’. ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮ ಪಾತ್ರದಲ್ಲಿದ್ದರೆ ಜ್ಯೂನಿಯರ್ ಎನ್‌ಟಿಆರ್ ಕೊಮಾರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಮೂಲ ತೆಲುಗು ಮತ್ತು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here