ಚಂದ್ರಕೀರ್ತಿ ನಟಿಸಿ, ನಿರ್ದೇಶನದ ‘ತೂತು ಮಡಿಕೆ’‌‌ ಮೋಷನ್ ಟೀಸರ್ ಬಿಡುಗಡೆಯಾಗಿದೆ. ನಟ ಶ್ರೀನಗರ ಕಿಟ್ಟಿ ಟೀಸರ್‌ ರಿಲೀಸ್‌ ಮಾಡಿ ಶುಭ ಹಾರೈಸಿದರು.

ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾಗಳಲ್ಲೊಂದು ‘ತೂತು ಮಡಿಕೆ’. ಈಗಾಗಲೇ ಶೂಟಿಂಗ್ ಮುಗಿಸಿರುವ ‘ತೂತು ಮಡಿಕೆ’ ಬಳಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಈಗ ಮೋಷನ್‌ ಟೀಸರ್ ರಿಲೀಸ್ ಮಾಡಿದೆ. ಸಿನಿಮಾದ ಮೋಷನ್ ಟೀಸರ್ ಅನ್ನು ನಟ ಶ್ರೀನಗರ ಕಿಟ್ಟಿ‌ ಅನಾವರಣ ಮಾಡಿ ಪ್ರತಿಭಾನ್ವಿತ ಕಲಾವಿದರ ಬೆನ್ನುತಟ್ಟಿದರು. ಬಳಿಕ‌ ಮಾತಾನಾಡಿದ ಕಿಟ್ಟಿ, “ಪೋಸ್ಟರ್‌ನಲ್ಲಿಯೇ ಪಾಸಿಟಿವ್ ಫೀಲ್ ಇದೆ. ಕೋವಿಡ್ ನಂತರ ಸಿನಿಮಾಗಳನ್ನು ಪ್ರೇಕ್ಷಕ ಚೆನ್ನಾಗಿ ಸ್ವೀಕರಿಸ್ತಿದ್ದಾನೆ. ಇಡೀ ಕೀರ್ತಿ ಟೀಂಗೆ ಒಳ್ಳೆದಾಗಲಿ” ಎಂದರು. ಮೋಷನ್ ಟೀಸರ್ ಸಖತ್ ಇಂಪ್ರೆಸಿವ್ ಆಗಿ‌ ಮೂಡಿಬಂದಿದ್ದು, ಕೀರ್ತಿ ವಿಶೇಷವಾಗಿ‌ ಮೋಷನ್ ಪೋಸ್ಟರ್ ಪ್ರಸೆಂಟ್ ಮಾಡಿದ್ದಾರೆ.

ತೂತು ಮಡಿಕೆ ಸಿನಿಮಾಗೆ ಚಂದ್ರಕೀರ್ತಿ ಎಂ.ಕತೆ, ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ನಾಯಕಿಯಾಗಿ ಪವನಾ ಗೌಡ, ಉಗ್ರಂ ಮಂಜು, ಶಂಕರ್ ಅಶ್ವತ್ಥ್​​​​​, ಗಿರೀಶ್​​ ಶಿವಣ್ಣ, ನಂದಗೋಪಾಲ್, ಅರುಣ್ ಮೂರ್ತಿ, ಸಿತಾರಾ, ರಾಘವೇಂದ್ರ. ಎನ್ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಸ್ವಾಮಿನಾಥನ್ ಆರ್.ಕೆ. ಸಂಗೀತ ನೀಡಿದ್ದಾರೆ. ಚಂದ್ರಕೀರ್ತಿ, ‘ಬೆಲ್​​​​​​ ಬಾಟಂ’ ಖ್ಯಾತಿಯ ರಘು ನಿಡುವಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಸ್ಪ್ರೆಡಾನ್ ಸ್ಟುಡಿಯೋ ಸಹಯೋಗದೊಂದಿಗೆ ಸರ್ವತ ಸಿನಿ ಗ್ಯಾರೇಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಹಿಂದೆ ನಟ ಶಿವರಾಜ್ ಕುಮಾರ್ ‘ತೂತು ಮಡಿಕೆ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡ ‘ತೂತು ಮಡಿಕೆ’ ಬಳಗದ ಕೆಲಸಕ್ಕೆ ಬೆನ್ನುತಟ್ಟಿದ್ದರು.

Previous article‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ನಟ – ನಿರ್ದೇಶಕ ಮಹೇಶ್‌ಗೆ ಜೋಡಿಯಾಗಿ ವೈಷ್ಣವಿ
Next articleಬಿಡುಗಡೆಯ ಹಂಬಲದಲ್ಲಿ ಬಡಿದಾಡುವ ಕಥೆಗಳು

LEAVE A REPLY

Connect with

Please enter your comment!
Please enter your name here