ಜೆನಿಲಿಯಾ, ಮಾನವ್‌ ಕೌಲ್‌ ನಟನೆಯ ‘ಟ್ರಯಲ್‌ ಪೀರಿಯಡ್‌’, ವರುಣ್‌ ಧವನ್‌ ಮತ್ತು ಜಾನ್ವಿ ಕಪೂರ್‌ ಜೋಡಿಯ ‘ಬವಾಲ್‌’, ‘They Cloned Tyrone’ ಸಿನಿಮಾಗಳು ಇಂದಿನಿಂದ (ಜುಲೈ 21) ಸ್ಟ್ರೀಮ್‌ ಆಗುತ್ತಿವೆ. ವಿಜಯ್‌ ವರ್ಮ ನಟನೆಯ ‘ಕಾಲ್‌ಕೂಟ್‌’ ಹಿಂದಿ ಸರಣಿ ಜುಲೈ 27ರಿಂದ ಸ್ಟ್ರೀಮ್‌ ಆಗಲಿದೆ.

Trial Period | ಜುಲೈ 21, JioCinema | ಆಧುನಿಕ ಕುಟುಂಬದ ಹೆಣ್ಣುಮಗಳು, ಸಿಂಗಲ್ ಮದರ್‌ ಆನಾಳ ಪಾತ್ರದಲ್ಲಿ ಜೆನಿಲಿಯಾ ಕಾಣಿಸಿಕೊಂಡಿದ್ದಾರೆ. ಆನಾಳ ಮಗ ‘ಮೂವತ್ತು ದಿನಗಳ ಟ್ರಯಲ್ ಅವಧಿಗೆ ನನಗೊಬ್ಬ ತಂದೆ ಬೇಕು’ ಎಂಬ ಬೇಡಿಕೆ ಮುಂದಿಟ್ಟಾಗ ಅವಳ ಬದುಕಿನ ದಿಕ್ಕು ಬದಲಾಗುತ್ತದೆ. ಮಗನ ಆಸೆಯನ್ನು ಈಡೇರಿಸಲು ಮುಂದಾದಾಗ ಪಿಡಿ ಅಲಿಯಾಸ್‌ ಪ್ರಜಾಪತಿ ದ್ವಿವೇದಿ ಪ್ರವೇಶವಾಗುತ್ತದೆ. ಇವನು ಆನಾ ಮತ್ತು ಅವಳ ಮಗನ ನಿರೀಕ್ಷೆಗಳಿಗೆ ವಿರುದ್ದದ ಸ್ವಭಾವದವನು. ಈ ಭಿನ್ನಾಭಿಪ್ರಾಯದಿಂದ ಎದುರಾಗುವ ಸವಾಲುಗಳು, ವೈಯಕ್ತಿಕ ಸಂಘರ್ಷಗಳು ಅನಿರೀಕ್ಷಿತವಾಗಿ ಹುಟ್ಟಿಕೊಳ್ಳುವ ಸಂಬಂಧಗಳು, ಪ್ರೇಮ ಮತ್ತು ಸ್ನೇಹದ ತಾಜಾತನ ಎಲ್ಲವನ್ನು ಒಳಗೊಂಡ ಕತೆ ಚಿತ್ರದಲ್ಲಿದೆ. ಜ್ಯೋತಿ ದೇಶಪಾಂಡೆ ನಿರ್ಮಿಸಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಶಕ್ತಿ ಕಪೂರ್, ಶಿಬಾ ಚಡ್ಡಾ, ಗಜರಾಜ್‌ ರಾವ್‌, ಮಾಸ್ಟರ್‌ ಝಿಡಾನೆ ಬ್ರೇಜ್‌ ಜಿಯೋ ಸ್ಟುಡಿಯೋಸ್‌ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದೆ.

ಬವಾಲ್‌ | ಜುಲೈ 21, Amazon Prime | ಯುದ್ಧದ ನಡುವೆ ನಡೆಯುವ ದುರಂತ ಪ್ರೇಮಕತೆ. ಮುಖ್ಯಭೂಮಿಕೆಯಲ್ಲಿ ನಟಿಸಿರುವ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಪಾತ್ರಗಳು ಹೃದಯಸ್ಪರ್ಶಿ ಘಟನೆಗಳೊಂದಿಗೆ ಪರಸ್ಪರ ವಿದಾಯ ಹೇಳುವುದು ಚಿತ್ರದ ಟ್ರೇಲರ್‌ನಲ್ಲಿ ಕಾಣಬಹುದು. ಸಾಜಿದ್ ನಾಡಿಯಾದ್‌ವಾಲಾ ಸಿನಿಮಾ ನಿರ್ಮಿಸಿದ್ದು, ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ದುಬಾರಿ ಸಿನಿಮಾ ಇದು.

They Cloned Tyrone | ಜುಲೈ 21, Netflix | ವೈಜ್ಞಾನಿಕ ಕಾಲ್ಪನಿಕ ಹಾಸ್ಯ ಚಲನಚಿತ್ರ. ಅಲ್ಲಿನ ಸ್ಥಳೀಯ ಸರ್ಕಾರಿ ಮೂಲದ ಸಂಸ್ಥೆಯೊಂದು ನಿಗೂಢವಾಗಿ ಭ್ರೂಣಗಳ (Clone) ತದ್ರೂಪಿಗಳನ್ನು ತಯಾರಿಸುವ ಸಂಚಿನ ವಿರುದ್ಧ ಹೋರಾಡುವ ಚಿತ್ರ. ಈ ವಿಲಕ್ಷಣ ಘಟನೆಗಳಿಗೆ ಕಾರಣವಾಗಿರುವ ಸರ್ಕಾರದ ಪಿತೂರಿಯ ಜಾಡನ್ನು ಹುಡುಕುವ ಸಾಹಸಮಯ ಸಿನಿಮಾ. ಇದರಲ್ಲಿ ಜಾನ್ ಬೊಯೆಗಾ, ಟೆಯೊನಾಹ್ ಪ್ಯಾರಿಸ್ ಮತ್ತು ಜೇಮೀ ಫ್ಯಾಕ್ಸ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಕಾಮಿಡಿ – ಆಕ್ಷನ್‌ – ಥ್ರಿಲ್ಲರ್‌ ಚಿತ್ರವನ್ನು Juel Taylor ನಿರ್ದೇಶಿಸಿದ್ದು, Tony Rettenmaier ಮತ್ತು Juel Taylor ಚಿತ್ರಕಥೆ ರಚಿಸಿದ್ದಾರೆ. MACRO Media ಪ್ರೊಡಕ್ಷನ್ಸ್‌ನಡಿ ಸಿನಿಮಾ ತಯಾರಾಗಿದೆ.

ಕಾಲ್‌ಕೂಟ್‌ | ಜುಲೈ 27, JioCinema | ಸರಣಿಯಲ್ಲಿ ನಟ ವಿಜಯ್‌ ವರ್ಮ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಇವರಿಗೆ ಮೇಲಾಧಿಕಾರಿಯಾಗಿ ಗೋಪಾಲ್ ವರ್ಮ ಕಾಣಿಸಿಕೊಂಡಿದ್ದಾರೆ. ವಿಜಯ್ ಅಧಿಕಾರಕ್ಕೆ ನೇಮಕಗೊಂಡು ಕೇವಲ ಮೂರು ತಿಂಗಳಾಗಿರುತ್ತದೆ. ಇದರ ಮದ್ಯೆ ವಿಜಯ್‌ ತಾಯಿ, ಅವನಿಗೆ ಮದುವೆಯಾಗಲೇಬೇಕು ಎಂದು ವಧುಗಳ ಪೋಟೋಗಳನ್ನು ತೋರಿಸುತ್ತಿರುತ್ತಾಳೆ. ಜೊತೆಗೆ ಇವನಿಗೆ ವಿವಾಹ ವೆಬ್‌ ಸೈಟ್‌ಗಳಿಂದ ಕರೆಗಳೂ ಸಹ ಬರುತ್ತಿರುತ್ತವೆ. ಆದರೆ ವಿಜಯ್‌ ಮದುವೆ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಈ ಮಧ್ಯೆ ವಿಜಯ್‌ ತಾಯಿ ತೋರಿಸಿದ ವಧುಗಳಲ್ಲಿ ಒಂದು ಹುಡುಗಿ ಆಸಿಡ್‌ ದಾಳಿಗೆ ಬಲಿಯಾಗುತ್ತಾಳೆ. ಇದರ ನಂತರ ಕತೆ ತಿರುವು ಪಡೆದು ವಿಜಯ್ ಅಪರಾಧಿಯನ್ನು ಕಂಡು ಹಿಡಿಯಲು ತನಿಖೆ ಶುರು ಮಾಡುತ್ತಾನೆ. ಮುಂದೆ ಕತೆ ಏನಾಗಲಿದೆ ಎಂಬುದನ್ನು ಸರಣಿ ತೋರಿಸಲಿದೆ.

ಆಯುಷ್ಮಾನ್ ಖುರಾನಾ ಅಭಿನಯದ ‘ಡಾಕ್ಟರ್ ಜಿ’ ಹಾಗೂ ರಸಿಕಾ ದುಗಲ್, ಹಮೀದ್ ಮತ್ತು ಕಾರ್ತಿಕ್ ಆರ್ಯನ್ ಅಭಿನಯದ ‘ಪ್ಯಾರ್ ಕಾ ಪಂಚನಾಮಾ’ ಚಲನಚಿತ್ರಗಳನ್ನು ಬರೆದಿರುವ ಸುಮಿತ್ ಸಕ್ಸೇನಾ ಈ ಸರಣಿ ನಿರ್ದೇಶಿಸಿದ್ದಾರೆ. ಸರಣಿಯಲ್ಲಿ ‘ಮಿರ್ಜಾಪುರ್’ ಖ್ಯಾತಿಯ ನಟಿ ಶ್ವೇತಾ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೀಮಾ ಬಿಸ್ವಾಸ್, ಯಶಪಾಲ್ ಶರ್ಮಾ ಇತರೆ ಪ್ರಮುಖ ಪಾತ್ರಧಾರಿಗಳು. ಸರಣಿಯು ಮೂಲ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಭೋಜ್‌ಪುರಿ, ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here