ಮೈಕಲ್ ನೇರವಾಗಿಯೇ ‘ಸಂಗೀತಾ ಟಾಸ್ಕ್ ಗೆದ್ದಾಗ ಸದಸ್ಯರ ಜೊತೆಗೆ ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಗೀತಾ ಮತ್ತು ತನಿಷಾ ಎರಡು ಗುಂಪುಗಳಲ್ಲಿ ಮನೆಯ ಸದಸ್ಯರೆಲ್ಲ ವಿಂಗಡಣೆಗೊಂಡು ಕ್ಯಾಪ್ಟನ್ಸಿಗಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಬಿಗ್‌ಬಾಸ್‌ ನಾಯಕಿಯರಿಗೆ ತಮ್ಮ ಮನೆಯ ಒಳ್ಳೆಯ ಸದಸ್ಯರ‌ನ್ನು ಹಣ ಕೊಟ್ಟು ಖರೀದಿಸುವ ಅವಕಾಶ ನಡೆದಿತ್ತು. ಯಾರಿಗೆ ಎಷ್ಟು ಗಣ ಕೊಡಲಾಗಿದೆ, ಟಾಸ್ಕ್‌ಗಳಲ್ಲಿ ಗೆದ್ದಾಗ ಎಷ್ಟು ಶೇರ್ ಕೊಡಲಾಗುತ್ತಿದೆ ಎಂಬುದರ ಕುರಿತು ಎರಡೂ ಗುಂಪುಗಳ ಸದಸ್ಯರಲ್ಲಿ ಅಸಮಾಧಾನಗಳಿವೆ. JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಈ ಅಸಮಾಧಾನ ಸ್ಪಷ್ಟವಾಗಿ ಕಾಣಿಸಿದೆ.

ಎರಡೂ ತಂಡದ ಕ್ಯಾಪ್ಟನ್‌ಗಳನ್ನು ಕೂಡಿಸಿಕೊಂಡು, ಅವರ ತಂಡದ ಸದಸ್ಯರಿಂದಲೇ ಅಭಿಪ್ರಾಯ ಹಂಚಿಕೊಳ್ಳಲು ಬಿಗ್‌ಬಾಸ್‌ ಸೂಚಿಸಿದ್ದಾರೆ. ಈ ಸಮಯದಲ್ಲಿ ಮೈಕಲ್ ನೇರವಾಗಿಯೇ ‘ಸಂಗೀತಾ ಟಾಸ್ಕ್ ಗೆದ್ದಾಗ ಸದಸ್ಯರ ಜೊತೆಗೆ ಬಂದ ಹಣದಲ್ಲಿ ಶೇರ್ ಸರಿಯಾಗಿ ಕೊಡುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂಗೀತಾ ಕೂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ತಂಡದೊಳಗೆ ಕಾಣಿಸಿಕೊಂಡಿರುವ ಈ ಬಿರುಕು ಗೆಲುವಿಗೆ ಅಡ್ಡಗಾಲಾಗಬಹುದಾ? ಉಳಿದ ಸದಸ್ಯರೂ ತಮ್ಮ ತಂಡದ ನಾಯಕರ ವಿರುದ್ಧ ಮಾತಾಡಬಹುದೇ? ಎನ್ನುವುದನ್ನು ನೋಡಬೇಕು.

LEAVE A REPLY

Connect with

Please enter your comment!
Please enter your name here