ಕಾರ್ತಿಕ್‌ ಗಟ್ಟಮನೇನಿ ನಿರ್ದೇಶನದ ‘ಈಗಲ್‌’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರವಿತೇಜ ಮತ್ತು ಅನುಪಮ ಪರಮೇಶ್ವರನ್‌ ನಟನೆಯ ಸಿನಿಮಾ 2024ರ ಜನವರಿ 13ರಂದು ತೆರೆಕಾಣಲಿದೆ.

ರವಿತೇಜ ಮತ್ತು ಅನುಪಮ ಪರಮೇಶ್ವರನ್ ಮುಖ್ಯ ಭೂಮಿಕೆಯಲ್ಲಿರುವ ‘ಈಗಲ್‌’ ಚಿತ್ರದ ತೆಲುಗು ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಕಾರ್ತಿಕ್ ಗಟ್ಟಮನೇನಿ ಅವರು ಚಿತ್ರಕಥೆ, ಸಂಕಲನ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರವಿತೇಜ ಕೊಲೆಗಾರನ ಪಾತ್ರ ನಿರ್ವಹಿಸಿದ್ದಾರೆ. ‘ನಾನು ವಿಷವನ್ನು ಸೇವಿಸುತ್ತೇನೆ. ಪ್ರಪಂಚದಾದ್ಯಂತ ತಿರುಗುತ್ತೇನೆ. ನಾನು ಜನರನ್ನು ರಕ್ಷಿಸಲು ಕೊಲೆಗಾರನೂ ಆಗುತ್ತೇನೆ. ನಾನು ವಿನಾಶವೂ ಹೌದು ಹಾಗೂ ಎಲ್ಲಾ ವಿನಾಶವನ್ನು ಕೊನೆಗೊಳಿಸುವ ದುರಂತವೂ ಹೌದು!’ ಎಂದು ರವಿತೇಜ ಹೇಳುವುದನ್ನು ಕಾಣಬಹುದು. ಚಿತ್ರದಲ್ಲಿ ನವದೀಪ್, ಕಾವ್ಯಾ ಥಾಪರ್, ಶ್ರೀನಿವಾಸ್ ಅವಸರಾಳ, ಮಧುಬಾಲಾ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಗಟ್ಟಮನೇನಿ ಮತ್ತು ಮಣಿಬಾಬು ಕರಣಂ ಚಿತ್ರಕಥೆ ರಚಿಸಿದಾರೆ. ದವ್ಜಂಡ್ (Davzand) ಛಾಯಾಗ್ರಹಣವಿದೆ. People Media Factory ನಿರ್ಮಾಣದ ಈ ಸಿನಿಮಾ ಜನವರಿ 13, 2024ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here