ಮೋಹನ್‌ ಲಾಲ್ ಅಭಿನಯದ ‘ಮರಕ್ಕರ್: ಅರೇಬಿಕಡಲಂಟೆ ಸಿಂಹಂ’ ಮಲಯಾಳಂ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಹೈದರಾಬಾದ್‌ನಲ್ಲಿ ಚಿತ್ರ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಸೆಟ್‌ಗೆ ನಟ ಅಜಿತ್ ಭೇಟಿ ನೀಡಿದ್ದ ಸಂದರ್ಭವೊಂದರ ವೀಡಿಯೋವನ್ನು ಮೋಹನ್‌ಲಾಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ನಟ ಮೋಹನ್‌ ಲಾಲ್ ಅಭಿನಯದ ‘ಮರಕ್ಕರ್: ಅರೇಬಿಕಡಲಂಟೆ ಸಿಂಹಂ’ ಮಲಯಾಳಂ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗುವ ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಪ್ರೊಮೋಷನ್ ಶುರುಮಾಡಿದ್ದಾರೆ. ಇದರ ಭಾಗವಾಗಿ ಶೂಟಿಂಗ್ ಸಂದರ್ಭದ ಒಂದು ವೀಡಿಯೋ ಹೊರಬಿದ್ದಿದೆ. ಹೈದರಾಬಾದ್‌ನ ರಾಮೋಜಿರಾವ್ ಸ್ಟುಡಿಯೋದಲ್ಲಿ ದುಬಾರಿ ಸೆಟ್ ಹಾಕಿ ಈ ಚಿತ್ರವನ್ನು ಶೂಟ್ ಮಾಡಲಾಗಿತ್ತು. ಆಗೊಮ್ಮೆ ಖ್ಯಾತ ತಮಿಳು ನಟ ಅಜಿತ್‌ ಸೆಟ್‌ಗೆ ಭೇಟಿ ನೀಡಿದ್ದರು. ಸೆಟ್‌ನಲ್ಲಿದ್ದ ನಿರ್ದೇಶಕ ಪ್ರಿಯದರ್ಶನ್‌, ಮೋಹನ್‌ಲಾಲ್‌, ಸುನೀಲ್ ಶೆಟ್ಟಿ ಹಾಗೂ ಇತರೆ ತಂತ್ರಜ್ಞರನ್ನು ಭೇಟಿ ಮಾಡಿ ಶುಭಕೋರಿದ ವೀಡಿಯೋವನ್ನು ಚಿತ್ರನಿರ್ಮಾಣ ಸಂಸ್ಥೆ ಆಶೀರ್ವಾದ್ ಬ್ಯಾನರ್ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.

‘ಮರಕ್ಕರ್: ಅರೇಬಿಕಡಲಂಟೆ ಸಿಂಹಂ’ ನೂರು ಕೋಟಿ ರೂಪಾಪಿ ಬಜೆಟ್‌ನಲ್ಲಿ ತಯಾರಾಗಿರುವ ದುಬಾರಿ ಸಿನಿಮಾ. 16ನೇ ಶತಮಾನದ ನೌಕಾದಳದ ಕಮ್ಯಾಂಡರ್‌ ಕುಂಜಾಲಿ ಮರಕ್ಕಲ್ ಸಾಹಸದ ಕತೆಯಿದು. ಪ್ರಣವ್ ಮೋಹನ್‌ಲಾಲ್‌, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು, ಮಂಜು ವಾರಿಯರ್, ಕೀರ್ತಿ ಸುರೇಶ್‌, ಸುಹಾಸಿನಿ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾ ಅತ್ಯುತ್ತಮ ಪ್ರಾದೇ‍ಷಿಕ ಭಾಷಾ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್‌, ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ. ನಿರ್ಮಾಪಕರು ಮೊದಲು ಚಿತ್ರವನ್ನು OTTಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಈಗ ಕೋವಿಡ್‌ ಸಂಕಷ್ಟ ತಿಳಿಯಾಗುತ್ತಿದ್ದಂತೆ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಲು ಯೋಜಿಸಲಾಗುತ್ತಿದೆ.

LEAVE A REPLY

Connect with

Please enter your comment!
Please enter your name here