ನಿರ್ಮಾಪಕ ಬೋನಿ ಕಪೂರ್‌ ತಮ್ಮ ನಿರ್ಮಾಣದ ವಾಲಿಮೈ ತಮಿಳು ಸಿನಿಮಾದ ಬಿಹೈಂಡ್‌ ದಿ ಸೀನ್ಸ್‌ ಬಿಡುಗಡೆ ಮಾಡಿದ್ದಾರೆ. ಹೀರೋ ಅಜಿತ್‌ ಹಾಗೂ ಸಾಹಸ ಕಲಾವಿದರು ಪಾಲ್ಗೊಂಡ ಆಕ್ಷನ್‌ ಸನ್ನಿವೇಶಗಳು ಈ ವೀಡಿಯೋದಲ್ಲಿವೆ.

ಅಜಿತ್‌ರ ‘ವಾಲಿಮೈ’ ತಮಿಳು ಸಿನಿಮಾದ ಚಿತ್ರೀಕರಣ ಎರಡು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಬೋನಿ ಕಪೂರ್‌ ನಿರ್ಮಾಣದಲ್ಲಿ ಎಚ್‌.ವಿನೋದ್‌ ನಿರ್ದೇಶಿಸುತ್ತಿರುವ ಚಿತ್ರವಿದು. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾಗೆ ಈಗ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಇದೀಗ ಚಿತ್ರತಂಡ ಮೇಕಿಂಗ್‌ ವೀಡಿಯೋ ಬಿಡುಗಡೆ ಮಾಡಿದ್ದು, ವೀಡಿಯೋದಲ್ಲಿ ಲಾಕ್‌ಡೌನ್‌ನಿಂದ ಚಿತ್ರತಂಡ ಎದುರಿಸಿದ ಸಮಸ್ಯೆಗಳೂ ಸೇರಿದಂತೆ ಈಗ ಚಿತ್ರೀಕರಣಗೊಳ್ಳುತ್ತಿರುವ ಸಾಹಸ ಸನ್ನಿವೇಶಗಳ ತುಣುಕುಗಳಿವೆ. ಹೀರೋ ಅಜಿತ್‌ ಡ್ಯೂಪ್‌ ಇಲ್ಲದೆ ಪಾಲ್ಗೊಂಡ ಬೈಕ್‌ ಸನ್ನಿವೇಶಗಳೂ ಇವೆ. ಸಾಹಸ ಸನ್ನಿವೇಶಗಳನ್ನು ವೀಕ್ಷಿಸಿದ ಅಭಿಮಾನಿಗಳು ಅಜಿತ್‌ರನ್ನು ಹಾಲಿವುಡ್‌ ಆಕ್ಷನ್‌ ಹೀರೋ ಟಾಮ್‌ಕ್ರ್ಯೂಸ್‌ಗೆ ತಮ್ಮ ನೆಚ್ಚಿನ ನಟನನ್ನು ಹೋಲಿಸಿ ಮಾತನಾಡಿದ್ದಾರೆ. ಕೋವಿಡ್‌ನಿಂದಾಗಿ ಶೂಟಿಂಗ್‌ ನಿಂತುಹೋಗಿದ್ದರೂ ಸಿನಿಮಾ ತಂತ್ರಜ್ಞರ ಸ್ಫೂರ್ತಿಯೇನೂ ಕುಂದುವುದಿಲ್ಲ ಎನ್ನುವ ಮೆಸೇಜನ್ನೂ ಇಲ್ಲಿ ಕನ್ವೇ ಮಾಡಿದ್ದಾರೆ. ‘ವಾಲಿಮೈ’ ಕಾಲಿವುಡ್‌ ಆಕ್ಷನ್‌ ಸಿನಿಮಾಗಳಿಗೆ ಬೆಂಚ್‌ಮಾರ್ಕ್‌ ಚಿತ್ರವಾಗಲಿದೆ ಎನ್ನಲಾಗಿದೆ. ಬೋನಿಕಪೂರ್‌ ನಿರ್ಮಾಣ, ವಿನೋದ್‌ ನಿರ್ದೇಶನ ಮತ್ತು ಅಜಿತ್‌ ನಟನೆಯಲ್ಲಿ ಈ ಹಿಂದೆ ‘ನೇರ್ಕೊಂಡ ಪಾರವೈ’ ಸಿನಿಮಾ ತೆರೆಕಂಡಿತ್ತು. ಈಗ ಎರಡನೇ ಬಾರಿ ಮೂವರೂ ಜೊತೆಯಾಗಿದ್ದಾರೆ. ಈ ಮೂವರು ಮತ್ತೊಂದು ಸಿನಿಮಾಗೆ ಜೊತೆಯಾಗುವುದಾಗಿ ಹೇಳಿದ್ದು, ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ. ‘ವಾಲಿಮೈ’ 2022ರ ಪೊಂಗಲ್‌ಗೆ ಬಿಡಗಡೆಯಾಗಲಿದೆ.

Previous articleK3G ಸಿನಿಮಾಗೆ 20 ವರ್ಷ!; ಐಕಾನಿಕ್‌ ಡೈಲಾಗ್‌ಗಳನ್ನು ಅನುಕರಿಸಿದ ಸೆಲೆಬ್ರಿಟಿಗಳು
Next articleಗಾಯಕ ಜಯಚಂದ್ರನ್‌ರಿಗೆ ‘ಜೆ.ಸಿ.ಡೇನಿಯಲ್‌ ಪ್ರಶಸ್ತಿ’; ಮಾಲಿವುಡ್‌ನ ಪ್ರತಿಷ್ಠಿತ ಗೌರವ

LEAVE A REPLY

Connect with

Please enter your comment!
Please enter your name here